ನಾಗಾಲೋಟದಲ್ಲಿ ಲ್ಯಾಂಡ್ ರೋವರ್ ಮಾರಾಟ

ಮಂಗಳವಾರ, 10 ಜನವರಿ 2017 (12:45 IST)
ಟಾಟಾ ಮೋಟಾರ್ಸ್ ಅಧೀನದಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ದಾಖಲೆ ನಿರ್ಮಿಸಿದ್ದು 55,375 ವಾಹನಗಗ್ಳು ಮಾರಾಟವಾಗಿವೆ. 2015 ಡಿಸೆಂಬರ್‌ಗೆ ಹೋಲಿಸಿದರೆ ಇದು ಶೇ.12ರಷ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.
 
ಇನ್ನು 2016ರ ಕ್ಯಾಲೆಂಡರ್ ವರ್ಷದಲ್ಲಿ 5,83,312 ವಾಹನಗಳು ಮಾರಾಟವಾಗಿದ್ದು ಅದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.20ರಷ್ಟು ಹೆಚ್ಚು ಎಂದು ತಿಳಿಸಿದೆ. 
 
ಟಾಟಾ ಮೋಟಾರ್ಸ್ ಅಧೀನ ಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಮತ್ತಷ್ಟು ವಿಶೇಷಗಳೊಂದಿಗೆ ಇತ್ತೀಚೆಗೆ  ರೇಂಜ್ ರೋವರ್ ಇವಾಕ್ಯೂ ಹೊರತಂದಿದೆ. ಇದರ ಬೆಲೆ ರೂ.49.10 ರಿಂದ 67.90 ಲಕ್ಷಗಳು (ಎಕ್ಸ್ ಶೋರೂಂ ದೆಹಲಿ ಬೆಲೆ) ಎಂದು ಕಂಪನಿ ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ