ರೆಪೊ ದರ ಮತ್ತೆ 25 ಮೂಲಾಂಶ ಹೆಚ್ಚಳ

ಭಾನುವಾರ, 12 ಫೆಬ್ರವರಿ 2023 (19:18 IST)
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು  ಮತ್ತೆ 25 ಮೂಲಾಂಶ ಹೆಚ್ಚಿಸಿದೆ. ಪರಿಷ್ಕೃತ ರೆಪೊ ದರವೀಗ ಶೇ 6.50 ಆಗಿದೆ. ಸೋಮವಾರದಿಂದ ಆರಂಭಗೊಂಡಿದ್ದ ಹಣಕಾಸು ನೀತಿ ಸಮಿತಿಯ ಸಭೆ ಬುಧವಾರ ಕೊನೆಗೊಂಡಿದ್ದು, ನಿರ್ಣಯಗಳನ್ನು ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದರು. ಇದರೊಂದಿಗೆ, 2022ರ ಮೇ ತಿಂಗಳ ನಂತರ ಸತತವಾಗಿ ಆರ್​ಬಿಐ ರೆಪೊ ದರ ಹೆಚ್ಚಿಸುತ್ತಾ ಬಂದಂತಾಗಿದ್ದು, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್​ಬಿಐ 225 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿದೆ. ಕಳೆದ ಕೆಲವು ಹಣಕಾಸು ನೀತಿಗಳಲ್ಲಿ ನಿರಂತರವಾಗಿ ರೆಪೊ ದರ ಹೆಚ್ಚಿಸುತ್ತಾ ಬಂದಿರುವುದು ಪರಿಣಾಮ ಬೀರಿದೆ. ಅದರಿಂದಾಗಿ ಸಗಟು ಮತ್ತು ಚಿಲ್ಲರೆ ಹಣದುಬ್ಬರಗಳು ಸಹನೆಯ ಮಟ್ಟಕ್ಕೆ ಬಂದಿವೆ. ಆದಾಗ್ಯೂ ಜಾಗತಿಕ ಆರ್ಥಿಕ ಪರಿಸ್ಥಿತಿ, ಅಮೆರಿಕದ ಫೆಡರಲ್ ಬ್ಯಾಂಕ್ ಮತ್ತು ಇತರ ದೇಶಗಳ ಕೇಂದ್ರೀಯ ಬ್ಯಾಂಕ್​​ಗಳ ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಹಣದುಬ್ಬರದ ವಿಚಾರದಲ್ಲಿ ನಮ್ಮ ಗುರಿಯನ್ನು ತಲುಪುವುದಕ್ಕಾಗಿ ದರ ಹೆಚ್ಚಿಸುವುದು ಸದ್ಯದ ಮಟ್ಟಿಗೆ ಅನಿವಾರ್ಯವಾಗಿದೆ. ಹೀಗಾಗಿ ರೆಪೊ ದರ ಹೆಚ್ಚಿಸುತ್ತಿದ್ದೇವೆ ಎಂದು ಶಕ್ತಿಕಾಂತ ದಾಸ್ ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ