ಝೂಮ್ನಲ್ಲಿ 1,300 ಉದ್ಯೋಗ ಕಡಿತ
ಕೊವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಹೆಚ್ಚಿನ ಬೇಡಿಕೆ ಗಳಿಸಿದ್ದ ಝೂಮ್ ಬಳಿಕ ಆದಾಯದಲ್ಲಿ ಕುಸಿತ ಕಂಡಿದೆ ಎಂದು ಝೂಮ್ ವಿಡಿಯೊ ಕಮ್ಯೂನಿಕೇಷನ್ಸ್ ಕಂಪನಿ ಹೇಳಿದೆ. ಈ ಹೆಜ್ಜೆಯು ಜಾಗತಿಕವಾಗಿ ಕಂಪನಿಯ ಶೇ.15ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು CEO ಎರಿಕ್ಯುವಾನ್ ತಿಳಿಸಿದ್ದಾರೆ. ಕಳೆದ ವರ್ಷ ಸಂಸ್ಥೆಯ ಷೇರುಗಳು ಶೇ 63ರಷ್ಟು ಕುಸಿತ ಕಂಡಿವೆ. ಕೋವಿಡ್ ಲಾಕ್ಡೌನ್ ಕಾಲಘಟ್ಟದಲ್ಲಿ ಮನೆಮಾತಾಗಿದ್ದ ಜನಪ್ರಿಯ ಝೂಮ್ ಆ್ಯಪ್ನ ಬೆಳವಣಿಗೆ ಆ ನಂತರ ಕುಂಠಿತಗೊಂಡಿದೆ. 2021ರ ಹಣಕಾಸಿನ ಸಾಲಿನಲ್ಲಿ ಝೂಮ್ ಆದಾಯ ಒಂಬತ್ತು ಪಟ್ಟು ಹೆಚ್ಚಾ ಗಿತ್ತು. 2022ರಲ್ಲಿ ನಾಲ್ಕು ಪಟ್ಟು (ಶೇ 6.7) ಮಾತ್ರ ಹೆಚ್ಚಳಗೊಂಡಿತ್ತು. ಅಲ್ಲದೆ 2022ರಲ್ಲಿ ಲಾಭ ಶೇ.38ರಷ್ಟು ಕುಸಿದಿದೆ ಎಂದು ವಿಶ್ಲೇ ಷಕರು ತಿಳಿಸುತ್ತಾರೆ.