ರೆಪೋದರ ಕಡಿತ: ವಾಣಿಜ್ಯ ಬ್ಯಾಂಕ್`ಗಳ ಸಾಲದ ಮೇಲಿನ ಬಡ್ಡಿ ದರ ಶೀಘ್ರ ಇಳಿಕೆ..?

ಬುಧವಾರ, 2 ಆಗಸ್ಟ್ 2017 (16:58 IST)
ಅಂತೂ ಇಂತೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಳೆದು ತೂಗಿ ಹಲವು ವರ್ಷಗಳ ಬಳಿಕ ರೆಪೋ ದರವನ್ನ ಕಡಿತಗೊಳಿಸಿದೆ. ಶೇ. 6.25 ರಷ್ಟಿದ್ದ ರೆಪೋ ದರದಲ್ಲಿ ಶೇ.0.25ರಷ್ಟನ್ನ ಕಡಿತಗೊಳಿಸಲಾಗಿದ್ದು, ಶೇ.6ಕ್ಕೆ ಇಳಿಸಲಾಗಿದೆ.

ನವೆಂಬರ್ 2010ಕ್ಕಿಂತಲೂ ಅತ್ಯಂತ ಕಡಿಮೆ ರೆಪೋ ದರವಿದು ಎನ್ನಲಾಗುತ್ತಿದೆ.ಇದರಿಂದ ಬ್ಯಾಂಕ್`ಗಳು ಗ್ರಾಹಕರಿಗೆ ನೀಡಿರುವ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಬಹುದಾಗಿದೆ. ವಾಣಿಜ್ಯ ಬ್ಯಾಂಕ್`ಗಳು ದರ ಕಡಿತವನ್ನ ಗ್ರಾಹಹಕರಿಗೆ ತಲುಪಿಸಬೇಕು ಎಂದು ಆರ್`ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ಆರ್`ಬಿಐ ರೆಪೋ ದರ ಕಡಿತಗೊಳಿಸಿರುವುದರಿಂದ ಬ್ಯಾಂಕ್`ಗಳು ಈಗಾಗಲೇ ನೀಡಿರುವ ಮತ್ತು ಭವಿಷ್ಯದಲ್ಲಿ ನೀಡಲಿರು ಗೃಹ ಸಾಲ, ವಾಹನ, ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ಸಾಲಗಳ ಮೇಲಿನ ಬಡ್ಡಿ ದರ ಕಡಿತಗೊಳ್ಳಲಿದೆ. ಇದರ ಜೊತೆಗೆ ರಿವರ್ಸ್ ರೆಪೋ(ವಾಣಿಜ್ಯ ಬ್ಯಾಂಕ್`ಗಳು ರಿಸರ್ವ್ ಬ್ಯಾಂಕ್`ನಲ್ಲಿಟ್ಟಿರುವ ಠೇವಣಿಗೆ ಕೊಡುವ ಬಡ್ಡಿ ದರ) ದರವನ್ನೂ 6 ರಿಂದ ಶೇ 5.75ಕ್ಕೆ ಇಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ