ಆಲ್ಟೊ 800 ಕಾರಿನ ಪರಿಷ್ಕೃತ ಮಾದರಿಯ ಆರಂಭದ ದರ 2.55 ಲಕ್ಷ ರೂ.
ಬುಧವಾರ, 18 ಮೇ 2016 (18:39 IST)
ದೇಶದ ಅತೀ ದೊಡ್ಡ ಕಾರು ತಯಾರಿಕೆ ಸಂಸ್ಥೆ ಮಾರುತಿ ಸುಜುಕಿ ಬುಧವಾರ ಆಲ್ಟೊ 800 ಕಾರಿನ ಪರಿಷ್ಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು ಇದರ ಎಕ್ಸ್ ಶೋರೂಂ ದರವು 2.55 ಲಕ್ಷ ರೂ.ಗಳಿಂದ 3.76 ಲಕ್ಷ ರೂ.ಗಳಾಗಿವೆ.
ದೇಶದ ಅತ್ಯುತ್ತಮ ಮಾರಾಟದ ಮಾದರಿ ಕಾರು ಅನೇಕ ಲಕ್ಷಣಗಳಿಂದ ಕೂಡಿದ್ದು, ಹೊಸ ಒಳಾವರಣ ಮತ್ತು ಒಂದು ಲೀಟರ್ ಪೆಟ್ರೋಲ್‌ಗೆ 24.7 ಕಿಮೀ ಅಧಿಕ ಇಂಧನ ಸಾಮರ್ಥ್ಯ, ಮುಂಚಿನ ಮಾದರಿಗಿಂತ ಶೇ. 9 ರಷ್ಟು ಸುಧಾರಣೆಯಾಗಿದೆ ಎಂದು ಎಂಎಸ್‌ಐ ಹೇಳಿಕೆಯಲ್ಲಿ ತಿಳಿಸಿದೆ.
ಸಿಎನ್‌ಜಿ ಮೋಡ್‌ನಲ್ಲಿ ಆಲ್ಟೊ 800 ಪ್ರತಿ ಲೀಟರ್‌ಗೆ 33.44 ಕಿಮೀ ಮೈಲೇಜ್ ಕೊಡಲಿದ್ದು, ಶೇ. 10 ರಷ್ಟು ಸುಧಾರಣೆಯಾಗಿದೆ.
ಹೊಸ ಆಲ್ಟೊ 800 ತಾಂತ್ರಿಕವಾಗಿ ಸುಧಾರಣೆಯಾಗಿದ್ದು, ಸುರಕ್ಷತಾ ಲಕ್ಷಣಗಳನ್ನು ಮತ್ತು ಎಲ್ಲಕ್ಕಿಂತ ಹೆಚ್ಚು ಮೈಲೇಜ್ ಸುಧಾರಣೆಯಾಗಿದೆ ಎಂದು ಎಂಎಸ್‌ಐ ಎಕ್ಸಿಕ್ಯೂಟಿವ್ ನಿರ್ದೇಶಕ ಆರ್. ಎಸ್.ಕಾಲ್ಸಿ ಹೇಳಿದ್ದಾರೆ.
ಆಲ್ಟೊ ಸತತವಾಗಿ 12 ವರ್ಷಗಳಿಂದ ದೇಶದ ಅತ್ಯಧಿಕ ಮಾರಾಟದ ಮಾದರಿಯಾಗಿ ಉಳಿದಿದ್ದು, 30 ಲಕ್ಷ ಮಾರಾಟದ ಮೈಲಿಗಲ್ಲನ್ನು ಮುಟ್ಟಿದ ಏಕಮಾತ್ರ ಭಾರತೀಯ ಕಾರ್ ಬ್ರಾಂಡ್. ಪರಿಷ್ಕೃತ ಮಾದರಿಯಲ್ಲಿ ಹೊಸ ಬಂಪರ್ ಮತ್ತು ಗ್ರಿಲ್ ಹೆಡ್ ಲ್ಯಾಂಪ್ ಮತ್ತು ಎರಡು ಹೊಸ ಬಣ್ಣಗಳು- ಮೊಜಿತೊ ಹಸಿರು ಮತ್ತು ಸೆರುಲಿಯನ್ ನೀಲಿಯಿಂದ ಕೂಡಿದೆ. ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.