ಆಗಸ್ಟ್ 1ರಿಂದ ಸಂಬಳ, ಇಎಂಐ ಪಾವತಿ ನಿಯಮ ಬದಲು!
ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (ಎನ್ಎ ಸಿಎಚ್) ವ್ಯವಸ್ಥೆ ಆಗಸ್ಟ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದ್ದು, ವಾರದ ಎಲ್ಲಾ ದಿನವೂ ದೊಡ್ಡ ಮೊತ್ತದ ಪಾವತಿ ಮಾಡಬಹುದಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಶಿಕಾಂತ ದಾಸ್ ಶನಿವಾರ ಈ ಘೋಷಣೆ ಮಾಡಿದ್ದು, ವಾರದ ರಜೆಗಳಿಂದ ತಡವಾಗುತ್ತಿದ್ದ ವಿಮಾ ಕಂತು ಪಾವತಿ, ವೇತನ ನೀಡುವಲ್ಲಿ ಕೊರತೆ, ಸಾಲದ ಕಂತು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದ್ದಾರೆ.
ಪೇಮೆಂಟ್ ಡಿವಿಡೆಂಡ್ಸ್, ಬಡ್ಡಿ, ವೇತನ ಹಾಗೂ ಪಿಂಚಣಿ ಸೇರಿದಂತೆ ಹಲವು ಪಾವತಿಗಳನ್ನು ವಾರದ ಎಲ್ಲಾ ದಿನವೂ ಮಾಡಲಿದೆ. ಇದರಿಂದ ವಾರಾಂತ್ಯದ ರಜೆ ಹಾಗೂ ಇತರೆ ರಜೆಗಳಿಂದ ಆಗುತ್ತಿದ್ದಂತೆ ಕಾಯುವಿಕೆ ಇನ್ನು ಮುಂದೆ ಇರುವುದಿಲ್ಲ ಎಂದು ಅವರು ವಿವರಿಸಿದರು.