ಶ್ರೀಕರಂ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ ನಟ ಶರ್ವಾನಂದ್
ಶನಿವಾರ, 29 ಮೇ 2021 (11:13 IST)
ಹೈದರಾಬಾದ್ : ಕೃಷಿ ಆಧರಿಸಿದ ಚಿತ್ರ ಶ್ರೀಕರಂನಲ್ಲಿ ನಟ ಶರ್ವಾನಂದ್ ಅವರು ನಟಿಸಿದ್ದಾರೆ. ಇದೀಗ ನಟ ಶರ್ವಾನಂದ್ ಅವರು ಶ್ರೀಕರಂ ಚಿತ್ರದ ನಿರ್ಮಾಪಕರ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದಾರಂತೆ.
ಶ್ರೀಕರಂ ಚಿತ್ರದಲ್ಲಿ ನಟಿಸಿಲು ನಟ ಶರ್ವಾನಂದ್ ಅವರು ಒಪ್ಪಿದ ಸಂಬಾವನೆಯಲ್ಲಿ 2 ಕೋಟಿ ರೂ ಮಾತ್ರ ನೀಡಿದ್ದಾರಂತೆ. ಶ್ರೀಕರಂ ಚಿತ್ರ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಇದು ವಿಮರ್ಶಕರಿಂದ ಸಕರಾತ್ಮಕ ಪ್ರತಿಕ್ರಿಯೆ ಪಡೆದಿದ್ದರು, ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿದೆ.
ಹೀಗಾಗಿ ನಿರ್ಮಾಪಕರು ನಟ ಶರ್ವಾನಂದ್ ಅವರಿಗೆ ಉಳಿದ ಸಂಭಾವನೆಯನ್ನು ನೀಡಲಿಲ್ಲವಂತೆ. ಹೀಗಾಗಿ ನಟ ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.