ಕ್ರಿಕೇಟ್ ಪ್ರಿಯರೇ ನಿಮಗೊಂದು ಪ್ರಶ್ನೆ?

ಶನಿವಾರ, 10 ಜುಲೈ 2021 (07:46 IST)
Bangalore : ರಾಜಸ್ಥಾನ್ ರಾಯಲ್ಸ್ ಪರ ಚೊಚ್ಚಲ ಐಪಿಎಲ್ ಸೀಸನ್ನಲ್ಲಿ ಕಣಕ್ಕಿಳಿದಿದ್ದ ಸೊಹೈಲ್ ತನ್ವೀರ್ ಅವರ 14 ರನ್ಗೆ 6 ವಿಕೆಟ್ ಕಬಳಿಸಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ಬರೆದಿದ್ದರು.


ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅದರೊಂದಿಗೆ ತಂಡಗಳ ಬಲಾಬಲ ಮತ್ತು ಸಾಮರ್ಥ್ಯದ ಬಗೆಗಿನ ಚರ್ಚೆಗಳು ಕೂಡ ಆರಂಭವಾಗಿದೆ. ಈ ಬಾರಿ  ಭಾರತದಲ್ಲೇ ಪಂದ್ಯಾವಳಿ ನಡೆಯುವುದರಿಂದ ಅನೇಕ ಹೊಸತನಗಳನ್ನು ನಿರೀಕ್ಷಿಸಬಹುದು.
  ಭಾರತದ ಪಿಚ್ಗಳಲ್ಲಿ ಬಿರುಗಾಳಿಯ ಬ್ಯಾಟಿಂಗ್, ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆಯಾಗುವ ಸಾಧ್ಯತೆಯಿದೆ. ಅದರ ಜೊತೆ ಬೌಲಿಂಗ್ ವಿಭಾಗವು ಕೂಡ ಈ ಬಾರಿ ಇಡೀ ಪಂದ್ಯಾವಳಿ ಮೇಲೆ ಪ್ರಭಾವ ಬೀರಲಿದೆ ಎಂಬ ಅಭಿಪ್ರಾಯಗಳು ಸಹ ಬಲವಾಗಿ ಕೇಳಿ ಬರುತ್ತಿವೆ. ಅದರಲ್ಲೂ  ಈ ಬಾರಿಯ ಐಪಿಎಲ್ ಹೊಸ ಹೊಸ ದಾಖಲೆಗಳಿಗೆ ಸಾಕ್ಷಿಯಾಗಲಿದೆ ಎನ್ನಲಾಗುತ್ತಿದೆ.
  ಐಪಿಎಲ್ನಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಅನೇಕ ರೆಕಾರ್ಡ್ಗಳು ಮೂಡಿಬಂದಿದೆ. ಈ ದಾಖಲೆಗಳಲ್ಲಿ ಕೆಲವೊಂದು ದಾಖಲೆಗಳು ಅಚ್ಚರಿಯ ಮತ್ತು ಅತ್ಯಂತ ಶ್ರೇಷ್ಠ ರೆಕಾರ್ಡ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಅಂತಹ ಮೂರು ದಾಖಲೆಗಳು ಯಾವುವು? ಎಂದು ನೋಡೋಣ...
  ವಿರಾಟ್ ಕೊಹ್ಲಿ ಬ್ಯಾಟಿಂಗ್ ದಾಖಲೆ:

  ಐಪಿಎಲ್ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರಲ್ಲಿ ನಡೆದ ಐಪಿಎಲ್ನಲ್ಲಿ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಒಟ್ಟಾರೆ ಸೀಸನ್ನಲ್ಲಿ ಗಳಿಸಿದ್ದು 973 ರನ್ಗಳು. ಕೊಹ್ಲಿಯ ಈ ಏಕಾಂಗಿ ಪ್ರದರ್ಶನದ ಹೊರತಾಗಿಯೂ ಆರ್ಸಿಬಿಗೆ ಫೈನಲ್ ಗೆಲ್ಲಲಾಗಲಿಲ್ಲ. ಹಾಗೆಯೇ ಕಳೆದ ಮೂರು ಸೀಸನ್ಗಳಿಂದಲೂ ಈ ದಾಖಲೆಯ ಅಸುಪಾಸಿನಲ್ಲಿ ಯಾವುದೇ ಬ್ಯಾಟ್ಸ್ಮನ್ ರನ್ಗಳಿಸಿಲ್ಲ ಎಂಬುದು ವಿಶೇಷ.
  3 ಬಾರಿ ಹ್ಯಾಟ್ರಿಕ್ ದಾಖಲೆ:

  ಐಪಿಎಲ್ನಲ್ಲಿ 3 ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಏಕೈಕ ಬೌಲರ್ ಅಮಿತ್ ಮಿಶ್ರಾ. ದೆಹಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ ಮಾಡುತ್ತಿರುವ ಹಿರಿಯ ಸ್ಪಿನ್ನರ್ 2008, 2011 ಮತ್ತು 2013ರ ಸೀಸನ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಐಪಿಎಲ್ನಲ್ಲಿ ಒಟ್ಟು 15 ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ರೂ, ಅಮಿತ್ ಮಿಶ್ರಾ ಅವರ ಈ ದಾಖಲೆಯನ್ನು ಮುರಿಯಲಾಗಲಿಲ್ಲ. ಹೀಗಾಗಿ  ಈ ಬಾರಿ ಈ ದಾಖಲೆಯನ್ನು ಯಾರಾದರೂ ಅಳಿಸಿ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ