ನವದೆಹಲಿ : ಸರ್ಕಾರಿ ಬ್ಯಾಂಕ್ ಎಸ್.ಬಿ.ಐ. ಗೃಹಸಾಲಗಳ ಬಡ್ಡಿದರ ಕಡಿತ ಮಾಡುವುದರ ಮೂಲಕ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ.
ರೆಪೋ ದರ ಕಡಿತ ಹಿನ್ನಲೆ ಯಲ್ಲಿ ಎಸ್.ಬಿ.ಐ. ಗೃಹಸಾಲ ಬಡ್ಡಿದರವನ್ನು ಶೇ.0.10ರಷ್ಟು ಕಡಿತ ಮಾಡಿದೆ. ಇಂದಿನಿಂದ (ಸೆಪ್ಟಂಬರ್ 10) ಈ ನೂತನ ದರ ಜಾರಿಗೆ ಬರಲಿದೆ. ಈ ಮೂಲಕ 2019-20 ಆರ್ಥಿಕ ವರ್ಷದಲ್ಲಿ ಎಸ್.ಬಿ.ಐ 5ನೇ ಬಾರಿ ಈ ರೀತಿ ಎಂಸಿಎಲ್ ಆರ್ ದರ ಇಳಿಕೆ ಮಾಡಿದೆ.
ಅದರ ಜೊತೆಗೆ ಎಸ್.ಬಿ.ಐ ಠೇವಣಿ ಬಡ್ಡಿದರವನ್ನು ಕಡಿತ ಮಾಡಿದ್ದು, 20 -25 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ.