ಬೆಂಗಳೂರು: ನವರಾತ್ರಿ ಹಾಗೂ ಶಬರಿಮಲೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ಕೊಲ್ಲಂ ನಡುವೆ 14 ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಆರಂಭವಾಗಲಿದೆ.
ಇದೆ 28ರಿಂದ ಡಿ.28ರವರೆಗೆ ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ಸಂಚರಿಸಲಿದೆ.
ಪ್ರತಿ ಭಾನುವಾರ ಸಂಜೆ 3:15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 12:55ಕ್ಕೆ ಕೊಲ್ಲಂ ತಲುಪಲಿದೆ.
ಇನ್ನೂ ರೈಲು ಸಂಖ್ಯೆ 07314 ಕೊಲ್ಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆ.29ರಿಂದ ಡಿ.29ರವರೆಗೆ ಪ್ರತಿ ಸೋಮವಾರ ಸಂಜೆ 5:00ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ಸಂಜೆ 6:30ಕ್ಕೆ ಹುಬ್ಬಳ್ಳಿ ತಲುಪಲಿದೆ.
ರೈಲಿನ ವಿಶೇಷತೆಗಳು:
ಈ ವಿಶೇಷ ರೈಲು ಒಟ್ಟು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 01 ಎಸಿ 2-ಟೈರ್, 02 ಎಸಿ 3-ಟೈರ್, 12 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.