‘ಸ್ಪಿನಲ್ ಮಸ್ಕೂಲರ್ ಅಟ್ರೊಫಿ’ ರೋಗದ ಔಷಧದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
ಸೋಮವಾರ, 27 ಮೇ 2019 (10:18 IST)
ಅಮೇರಿಕಾ : ಅಮೆರಿಕದಲ್ಲಿ ಹುಟ್ಟುವ ಶಿಶುಗಳಲ್ಲಿ ಕಂಡುಬರುವ ಸ್ಪಿನಲ್ ಮಸ್ಕೂಲರ್ ಅಟ್ರೊಫಿ ರೋಗಕ್ಕೆ ಕೊನೆಗೂ ಔಷಧ ಕಂಡು ಹಿಡಿಯಲಾಗಿದ್ದು, ಆದರೆ ಈ ಔಷಧಿಯ ಬೆಲೆ ಕೇಳಿದರೆ ದಂಗಾಗ್ತೀರಾ.
ಅಮೇರಿಕಾದಲ್ಲಿ ಒಂದು ವರ್ಷಕ್ಕೆ ಸುಮಾರು 400 ಮಕ್ಕಳು ಈ ರೋಗದಿಂದ ಬಳಲುತ್ತಿದ್ದು, ಹಲವು ಮಕ್ಕಳು ಸಾವನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಅಮೆರಿಕಾ ಮೂಲದ ನೋವರ್ಟಿಸ್ ಎಂಬ ಔಷಧ ಸಂಶೋಧನಾ ಸಂಸ್ಥೆ ಈ ಮೆಡಿಸಿನ್ ಕಂಡು ಹಿಡಿದಿದೆ. ಈ ಔಷಧಿಯ ಬೆಲೆ ಬರೋಬ್ಬರಿ 2.1 ಮಿಲಿಯನ್ ಡಾಲರ್ (14 ಕೋಟಿ ) ಆಗಿದೆ.
ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಕೂಡ ಈಗಾಗಲೇ ಈ ಔಷಧ ಬಳಕೆಗೆ ಅನುಮತಿ ನೀಡಿದೆ. ಈ ಚಿಕಿತ್ಸೆಗೆ ‘Zolgensma ‘ ಎಂದು ಕೂಡ ಕರೆಯಲಾಗಿದೆ. ಜೆನಿಟಿಕ್ ಪರೀಕ್ಷೆ ಮೂಲಕ ರೋಗ ದೃಢಪಡಿಸಿದ ಬಳಿಕ ಈ ಚಿಕಿತ್ಸೆ ಮಕ್ಕಳಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ.