ಹಣ್ಣುಗಳನ್ನು ಈ ರೀತಿ ತಿಂದರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು
ಶನಿವಾರ, 18 ಮೇ 2019 (09:39 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಮತ್ತಷ್ಟು ಪ್ರಯೋಜನ ಪಡೆಯಬಹುದು. ಆದ್ದರಿಂದ ಯಾವ ಹಣ್ಣನ್ನು ಯಾವ ರೀತಿ ತಿಂದರೆ ಉತ್ತಮ ಎಂಬುದು ತಿಳಿಯಿರಿ.
ಹೊಟ್ಟೆಯಲ್ಲಿ ಸಂಕಟವಾದಾಗ ಕಲ್ಲಂಗಡಿ ಹಣ್ಣು, ಕರ್ಬೂಜ, ಬಾಳೆ ಹಣ್ಣು, ನಿಂಬೆ, ದಾಳಿಂಬೆ ಮುಂತಾದ ತಂಪು ಹಣ್ಣುಗಳನ್ನು ಸೇವಿಸಿದರೆ ಮನಸ್ಸು ಶಾಂತವಾಗುತ್ತದೆ. ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸುವ ಬದಲು ಅದು ಇರುವ ರೂಪದಲ್ಲಿಯೇ ಸೇವಿಸಿದರೆ ಉತ್ತಮ. ಬೇಸಿಗೆಯಲ್ಲಿ ಐಸ್ ಕ್ಯೂಬ್‌ಗಳ ಮೇಲೆ ಹಣ್ಣಿನ ಹೋಳುಗಳನ್ನು ಹರಿಡಿಸಿಟ್ಟು ತಿಂದರೆ ತಂಪಾಗಿರುತ್ತದೆ.
ದಾಳಿಂಬೆ, ಕಲ್ಲಂಗಡಿ, ನೇರಳೆ, ಕವಳೆ ಮುಂತಾದ ಹಣ್ಣುಗಳಿಗೆ ಉಪ್ಪು ಸವರಿ ತಿಂದರೆ ವಿಶೇಷ ರುಚಿ ಸಿಗುತ್ತದೆ.
ಪೈನಾಪಲ್, ಪೇರಳೆ ಹಣ್ಣುಗಳಿಗೆ ಉಪ್ಪು ಹಾಗೂ ಖಾರ ಪುಡಿ ಉದುರಿಸಿ ತಿಂದರೆ ರುಚಿ ಜಾಸ್ತಿ. ಆಯಾ ಕಾಲಕ್ಕೆ ಬರುವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಸಕ್ಕರೆ ಕಾಯಿಲೆಯವರಿಗೆ ಎಲ್ಲಾ ಹಣ್ಣುಗಳ ಸೇವನೆ ಸೂಕ್ತವಲ್ಲ. ವೈದ್ಯರು ಸೂಚಿಸಿದ ಹಣ್ಣುಗಳನ್ನು ಮಾತ್ರ ಸೇವಿಸಿದರೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.