ಹೊರಗಡೆ ಸೆಕೆಯಿಂದ ಪರದಾಡುವವರಿಗೆ ಸೋನಿ ಕಂಪೆನಿ ತಯಾರಿಸಿದೆ ಕಿರು ಎಸಿ
ಶನಿವಾರ, 27 ಜುಲೈ 2019 (06:43 IST)
ನವದೆಹಲಿ : ಹೊರಗಡೆ ಹೋದಾಗ ಸೆಕೆ ತಾಳಲಾರದೆ ಕೆಲವರು ಒದ್ದಾಡುತ್ತಾರೆ. ಅಂತವರು ಇನ್ನುಮುಂದೆ ಬಟ್ಟೆಯ ಜೊತೆ ಎಸಿಯನ್ನು ಧರಿಸಿಕೊಂಡು ಹೋಗಬಹುದು.
ಹೌದು. ಸೋನಿ ಕಂಪನಿ ವಿಭಿನ್ನ ಎಸಿಯೊಂದನ್ನು ತಯಾರಿಸಿದ್ದು ಈ ಪೋರ್ಟಬಲ್ ಎಸಿಗೆ ಕಂಪನಿ ರಿಯಾನ್ ಪಾಕೆಟ್ ಎಂದು ಹೆಸರಿಟ್ಟಿದೆ. ಇದು ಮೊಬೈಲ್ ಫೋನ್ ಗಿಂತ ಚಿಕ್ಕದು ಹಾಗೂ ಹಗುರವಾಗಿದ್ದು, ಇದನ್ನು ಬಟ್ಟೆ ಜೊತೆ ಧರಿಸಬಹುದು. ಆದರೆ ಈ ಸಾಧನವನ್ನು ಬಳಸಬೇಕಿದ್ದರೆ, ವಿಶೇಷ ರೀತಿಯ ಒಳ ಅಂಗಿಯನ್ನು ಧರಿಸಬೇಕಾಗುತ್ತದೆ. ಈ ಒಳ ಅಂಗಿಯು ಸಾಧನದ ಜೊತೆಗೆ ಸಿಗಲಿದೆ.
ಈ ಎಸಿಯನ್ನು ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಿಸಬಹುದು. ಅಲ್ಲದೇ ಇದರಲ್ಲಿ ವಾತಾವರಣಕ್ಕೆ ಅನುಗುಣವಾಗಿ ಉಷ್ಣತೆಯನ್ನು ತನ್ನಿಂತಾನಾಗಿ ಹೊಂದಿಸುವ ಸ್ವಯಂಚಾಲಿತ ವ್ಯವಸ್ಥೆಯೂ ಇದೆ. ಈ ಎಸಿಯನ್ನು ಎರಡು ಗಂಟೆ ಚಾರ್ಜ್ ಮಾಡಿದ್ರೆ ನೀವು 90 ನಿಮಿಷಗಳ ಕಾಲ ಬಳಸಬಹುದು.
ಸೋನಿ ಕಂಪನಿಯ ಈ ಎಸಿ ಬೆಲೆ 8990 ರೂಪಾಯಿ. ಒಳ ಉಡುಪಿನ ಬೆಲೆ 12 ಸಾವಿರ ರೂಪಾಯಿ. ಇದು ಸದ್ಯಕ್ಕೆ ಜಪಾನ್ ನಲ್ಲಿ ಮಾತ್ರ ಲಭ್ಯವಿದೆ. ಹಾಗೇ ಈವರೆಗೂ ಪುರುಷರಿಗೆ ಮಾತ್ರ ಈ ಬಟ್ಟೆ ತಯಾರಿಸಲಾಗಿದ್ದು, ಮಹಿಳೆಯರಿಗೆ ಲಭ್ಯವಾಗಿಲ್ಲ.