ನ್ಯಾನೋ ಕಾರ್ ಗೆ ಸದ್ಯದಲ್ಲೇ ಟಾಟಾ?
ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಕಾರಣ, ಮುಂದೆ ನ್ಯಾನೋ ಉತ್ಪನ್ನದ ಮೇಲೆ ಹೂಡಿಕೆ ಮಾಡದಿರಲು ಸಂಸ್ಥೆ ನಿರ್ಧರಿಸಿದೆ ಎಂದು ಹಿಂದೂ ಬ್ಯುಸಿನೆಸ್ ಲೈನ್ ವರದಿ ಮಾಡಿದೆ. ಆದರೆ ರಫ್ತು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. 1 ಲಕ್ಷ ರೂ. ಗೆ ಜನ ಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಕಾರು ಒದಗಿಸಿ ರತನ್ ಟಾಟಾ ತಮ್ಮ ಜೀವನದ ಕನಸು ನನಸುಗೊಳಿಸಿದ್ದರು.