ಅಮೆರಿಕಾದಲ್ಲಿ ಕಾರು ಅಪಘಾತದಲ್ಲಿ ಬಲಿಯಾದ ಹೈದರಾಬಾದ್ ಕುಟುಂಬ

Krishnaveni K

ಮಂಗಳವಾರ, 8 ಜುಲೈ 2025 (12:58 IST)
Photo Credit: X
ಡಾಲಸ್: ಅಮೆರಿಕಾದ ಡಾಲಸ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಹೈದರಾಬಾದ್ ಮೂಲದ ತಂದೆ-ತಾಯಿ ಮಕ್ಕಳು ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ.

ಅಟ್ಲಾಂಟಾದಿಂದ ಡಾಲಸ್ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಗ್ರೀನ್ ಕೌಂಟಿ ಬಳಿಕ ಮಿನಿ ಟ್ರಕ್ ಒಂದು ಇವರ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಗಂಡ-ಹೆಂಡತಿ ಮತ್ತು ಅವರ ಓರ್ವ ಪುತ್ರ, ಪುತ್ರಿ ಸಾವನ್ನಪ್ಪಿದ್ದಾರೆ.

ಮೃತರು ಹೈದರಾಬಾದ್ ಮೂಲದವರಾಗಿದ್ದು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅಟ್ಲಾಂಟಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬ ಡಾಲಸ್ ನಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಮೃತರನ್ನು ವೆಂಕಟ್ ಬೇಜುಗಮ್, ಪತ್ನಿ ತೇಜಸ್ವಿನಿ, ಪುತ್ರ ಸಿದ್ಧಾರ್ಥ್ ಮತ್ತು ಪುತ್ರಿ ಮೃದಾ ಬೇಜಗಮ್ ಎಂದು ಗುರುತಿಸಲಾಗಿದೆ. ಕಾರು ಬೆಂಕಿಗೆ ಆಹುತಿಯಾಗಿದ್ದರಿಂದ ಮೃತದೇಹ ಸುಟ್ಟು ಕರಕಲಾಗಿದೆ. ಡಿಎನ್ ಎ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ