ಅಗತ್ಯವಿಲ್ಲದ ಕಡೆ ಆಧಾರ ಕಾರ್ಡ್ ಕೇಳುವ ಕಂಪೆನಿಗಳಿಗೆ ಜೈಲುಶಿಕ್ಷೆ ವಿಧಿಸಲು ಮುಂದಾದ ಕೇಂದ್ರ ಸರ್ಕಾರ

ಬುಧವಾರ, 19 ಡಿಸೆಂಬರ್ 2018 (14:56 IST)
ನವದೆಹಲಿ : ಇನ್ನುಮುಂದೆ ಕಂಪನಿಗಳೇನಾದರೂ ಆಧಾರ್​ ನೀಡಬೇಕೆಂದು ಒತ್ತಾಯಿಸಿದ್ದಲ್ಲಿ  ಅಂತವರಿಗೆ 1 ಕೋಟಿ ರೂ. ದಂಡ ಹಾಗೂ ಜೈಲುಶಿಕ್ಷೆ ವಿಧಿಸಲೂ ಕೇಂದ್ರ ಸರ್ಕಾರ ಮುಂದಾಗಿದೆ.


ಹೌದು. ಮೊಬೈಲ್​ ಸಂಪರ್ಕ ಹಾಗೂ ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಕಡ್ಡಯವಲ್ಲ ಎಂಬ ನಿಯಮವನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇಷ್ಟಾದರೂ ಕೆಲವು ಕಂಪೆನಿಗಳಲ್ಲಿ ಆಧಾರ್​ ಕಾರ್ಡನ್ನೇ ಪ್ರಧಾನ ಗುರುತಿನ ಪತ್ರವಾಗಿ ಹಾಗೂ ವಿಳಾಸದ ದಾಖಲೆಯಾಗಿ ನೀಡುವಂತೆ ಕೇಳುತ್ತಿವೆ.


ಈ ಹಿನ್ನಲೆಯಲ್ಲಿ ಇದೀಗ ಇನ್ನುಮುಂದೆ ಕಂಪನಿಗಳೇನಾದರೂ ಆಧಾರ್​ ನೀಡಬೇಕೆಂದು ಒತ್ತಾಯಿಸಿದ್ದಲ್ಲಿ 1 ಕೋಟಿ ರೂ. ದಂಡ ವಿಧಿಸುವುದರ ಜೊತೆಗೆ ಅಂತಹವರನ್ನು 3 ರಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವುದಾಗಿ ಕಾನೂನು ರೂಪಿಸಿದೆ. ಅಲ್ಲದೆ, ಆಧಾರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡರೆ, 50 ಲಕ್ಷ ದಂಡ ಹಾಗೂ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ