ಹೊಸ ವಿದ್ಯುತ್ ದರ ನೀತಿಯನ್ನು ಜಾರಿಗೆ ತರಲಿದೆ ಕೇಂದ್ರ ಸರ್ಕಾರ

ಗುರುವಾರ, 11 ಜುಲೈ 2019 (09:58 IST)
ನವದೆಹಲಿ : ಅಡುಗೆ ಅನಿಲ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ವಿದ್ಯುತ್ ಸಬ್ಸಿಡಿಯನ್ನೂ ಕೂಡಾ ಬಳಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಲಾಗಿದೆ.




ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಇಂಧನ ಸಚಿವಾಲಯ, ಈ ಹೊಸ ವಿದ್ಯುತ್ ದರ ನೀತಿಯನ್ನು ಸಿದ್ದಪಡಿಸಿದ್ದು, ಇದಕ್ಕೆ ಲೋಕಸಭೆಯಲ್ಲಿ ಈಗಾಗಲೇ ಅನುಮೋದನೆಯೂ ಸಿಕ್ಕಿದೆ. ಅಲ್ಲದೆ ಪ್ರತಿ ಮನೆಗೂ ಸ್ಮಾರ್ಟ್ ಮೀಟರ್ ಅಳವಡಿಸಲಿದ್ದು, ಅದರ ವೆಚ್ಚವನ್ನು ಗ್ರಾಹಕರು ಕಂತುಗಳಲ್ಲಿ ತುಂಬಲು ಅವಕಾಶ ನೀಡುವುದಾಗಿ ತೀರ್ಮಾನಿಸಲಾಗಿದೆ.


ಇತ್ತೀಚಿನ ದಿನಗಳಲ್ಲಿ  ಬಡವರ ಜೊತೆಗೆ ಶ್ರೀಮಂತರು ವಿದ್ಯುತ್ ಸಬ್ಸಿಡಿ ಸೌಲಭ್ಯ ಪಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಈ ಹೊಸ ವಿದ್ಯುತ್ ನೀತಿ ಜಾರಿಗೆ ಬರುತ್ತಿದೆ ಎನ್ನಲಾಗಿದೆ. ಆದರೆ ಸರ್ಕಾರದ ಈ ನೀತಿ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ