139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದ ವೋಡಾಫೋನ್
ಮಂಗಳವಾರ, 9 ಜುಲೈ 2019 (09:09 IST)
ನವದೆಹಲಿ : ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರ ಶುರುವಾಗಿದ್ದು, ಇದು ಏರ್ ಟೆಲ್ ಮತ್ತು ವೊಡಾಫೋನ್ ಗಳ ದರ ಪರಿಷ್ಕರಣೆಗೆ ಕಾರಣವಾಗಿದೆ . ಆದಕಾರಣ ಇದೀಗ ವೋಡಾಫೋನ್ ತನ್ನ 139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದೆ.
ಈ ಮೊದಲು ವೊಡಾಫೋನ್ 139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ 5 GB ಡೇಟಾ ದೊರೆಯುತ್ತಿತ್ತು. ಆದರೆ ಇದೀಗ ವೋಡಾಫೋನ್ ತನ್ನ 139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದ್ದು, ಈಗ ಕಂಪನಿಯು ಅದರಲ್ಲಿ 2GB ಇಳಿಸಿದೆ. ಅಂದರೆ ಈಗ ಬಳಕೆದಾರರಿಗೆ ಈ ಯೋಜನೆಯಲ್ಲಿ 3GB ಡೇಟಾವನ್ನು ನೀಡಲಾಗುವುದು.
ವೊಡಾಫೋನ್ ಬಳಕೆದಾರರಿಗೆ ಈಗ ಈ ಯೋಜನೆಯಲ್ಲಿ 3GB ಯ 4G / 3G ಡೇಟಾವನ್ನು ಪಡೆಯುವುದರ ಜೊತೆಗೆ ಅನಿಯಮಿತ ಸ್ಥಳೀಯ, ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳು ಇರುತ್ತವೆ. ಈ ಯೋಜನೆಯಲ್ಲಿ 300 ಎಸ್ ಎಂಎಸ್ ಸಹ ಬಳಕೆದಾರರಿಗೆ ಲಭ್ಯವಾಗಲಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.