ರಿಲಯನ್ಸ್‌ ಬಿಗ್‌ಟಿವಿಯಿಂದ ಬಾರಿ ಆಫರ್ ಒಂದು ವರ್ಷ ಉಚಿತ ಚಾನಲ್...!

ಗುರುಮೂರ್ತಿ

ಶನಿವಾರ, 3 ಮಾರ್ಚ್ 2018 (16:17 IST)
ದೇಶದಲ್ಲಿ ಜಿಯೋ ಮೂಲಕ ಸದ್ದು ಮಾಡಿದ್ದ ರಿಲಾಯನ್ಸ್ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನೀಡಿದೆ. ಆ ಮೂಲಕ ರಿಲಯನ್ಸ್, ದೇಶದಲ್ಲಿ ಮನರಂಜನಾ ವಲಯದಲ್ಲಿ ಕ್ರಾಂತಿ ಮಾಡಲು ಮುಂದಾಗಿದೆ.

ಈಗಾಗಲೇ ಡಿಟಿಎಚ್ ವಲಯಕ್ಕೆ ಕಾಲಿರಿಸಿರುವ ರಿಲಾಯನ್ಸ್, 1 ವರ್ಷದವರೆಗೆ 500 ಕ್ಕೂ ಹೆಚ್ಚು ಎಚ್ ಡಿ ಚಾನಲ್‌ಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದು, ಈ ಕೊಡುಗೆಯ ಲಾಭವನ್ನು ಪಡೆಯುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ನಿಮಗಾಗಿ.
 
ರಿಲಾಯನ್ಸ್ ಈಗಾಗಲೇ ಡಿಟಿಎಚ್ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿದ್ದು, ತನ್ನ ಗ್ರಾಹಕರಿಗಾಗಿ ಶುಲ್ಕ ರಹಿತವಾದ 500 ಚಾನಲ್‌ಗಳನ್ನು 5 ವರ್ಷದವರೆಗೆ ಉಚಿತವಾಗಿ ಮತ್ತು ಶುಲ್ಕವಿರುವ ಚಾನಲ್‌ಗಳನ್ನು 1 ವರ್ಷದವರೆಗೆ ಉಚಿತವಾಗಿ ನೀಡಲು ಮುಂದಾಗಿದೆ. ಇದಕ್ಕಾಗಿ ರಿಲಾಯನ್ಸ್ ಉಚಿತವಾಗಿ ಸೆಟ್‌ ಅಪ್ ಬಾಕ್ಸ್ (HD HEVC) ಅನ್ನು ನೀಡಲಿದ್ದು, ಅದನ್ನು ಪಡೆದುಕೊಳ್ಳಲು ನೀವು ಮುಂಚಿತವಾಗಿ ಬುಕಿಂಗ್ ಮಾಡಬೇಕಾಗುತ್ತದೆ. ಈಗಾಗಲೇ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು ನೀವು ಕೂಡಾ ಶೀಘ್ರವಾಗಿ ಬುಕಿಂಗ್ ಮಾಡುವ ಮೂಲಕ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಒಂದು ವರ್ಷ ಉಚಿತ ಕೊಡುಗೆಯನ್ನು ಪಡೆಯುವುದು ಹೇಗೆ?
 
ಈ ಆಫರ್‌ ಅನ್ನು ನಿಮ್ಮದಾಗಿಸಿಕೊಳ್ಳಲು ನೀವು ಮೊದಲಿಗೆ ಬುಕಿಂಗ್ ಮಾಡುವ ಸಂದರ್ಭದಲ್ಲಿ ರೂ 499 ಪಾವತಿಸಬೇಕಾಗುತ್ತದೆ. ತದನಂತರ ನಿಮಗೆ ಸೆಟಾಪ್ ಬಾಕ್ಸ್ ಮತ್ತು ಹೊರಗಿನ ಬಿಡಿಭಾಗಗಳು (ಡಿಶ್ ಬಿಡಿಭಾಗ) ಗಳನ್ನು ಒದಗಿಸಲಾಗುತ್ತದೆ. ಅದನ್ನು ಪಡೆದುಕೊಂಡ ನಂತರ ನೀವು ಮತ್ತೊಮ್ಮೆ 1500 ರೂ ಪಾವತಿಸಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಈ ಒಂದು ವರ್ಷದ ಸಂಪೂರ್ಣ ಪ್ಯಾಕಜ್ ಅನ್ನು ನೀವು ಉಚಿತವಾಗಿ ಪಡೆಯಬಹುದು.
 
ಅಲ್ಲದೇ ಮೊದಲನೇ ವರ್ಷ ಮುಗಿದ ನಂತರ ಪಾವತಿ ಚಾನಲ್‌ಗಳನ್ನು ವೀಕ್ಷಿಸಲು ಮಾಸಿಕವಾಗಿ 300 ರೂ ಪಾವತಿಸಬೇಕಾಗುತ್ತದೆ. ಹೀಗೆ ಎರಡನೇ ವರ್ಷದ ಎಲ್ಲಾ ತಿಂಗಳು 300 ರೂ ನಂತೆ ಪಾವತಿಸಿದ ಬಳಿಕ ಬುಕಿಂಕ್ ಅವಧಿಯಲ್ಲಿ ನೀಡಲಾಗಿದ್ದ, 1999 ರೂ ಹಣವನ್ನು ಮರಳಿ ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ.
ಮಾರ್ಚ್ 1 ರಿಂದ ಈ ಬುಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಬುಕಿಂಗ್ ಮಾಡಿದ 30 ರಿಂದ 45 ದಿನಗಳ ಒಳಗಾಗಿ ನೀವು ರಿಲಾಯನ್ಸ್ ಬಿಗ್ ಟಿವಿಯನ್ನು ಹೊಂದಬಹುದು. ಅಲ್ಲದೇ ಒಬ್ಬ ಗ್ರಾಹಕ 5 ಸೆಟ್‌ ಆಪ್ ಬಾಕ್ಸ್ ಅನ್ನು ಬುಕಿಂಗ್ ಮಾಡಬಹುದು ಎಂದು ಹೇಳಲಾಗಿದೆ.
 
ಈ ಕುರಿತು ಹೇಳಿಕೆ ನೀಡಿದ ರಿಲಾಯನ್ಸ್ ಬಿಗ್ ಟಿವಿಯ ನಿರ್ದೇಶಕರಾದ ವಿಜಯೇಂದರ್ ಸಿಂಗ್, ಭಾರತೀಯರು ತಮ್ಮ ಟಿವಿ ಸೆಟ್‌ಗಳಲ್ಲಿ ಮನರಂಜನೆಯನ್ನು ವೀಕ್ಷಿಸುವ ರೀತಿಗೆ ಹೊಸ ಆಯಾಮವನ್ನು ಆರಂಭಿಸುವಲ್ಲಿ ರಿಲೆಯನ್ಸ್ ಬಿಗ್ ಟಿವಿ ಮುಂದಾಗಿದೆ ಮತ್ತು ಇಂದಿನಿಂದಲೇ ಆಫರ್‌ನಲ್ಲಿರುವಂತೆ ಎಲ್ಲಾ ಚಾನಲ್‌ಗಳು ಲಭ್ಯವಿದ್ದು, ಶುಲ್ಕ ಸಹಿತ ಚಾನಲ್‌ಗಳು ಇತ್ತೀಚಿನ ಆಫರ್‌ಗಳಿಗೆ ಅನುಗುಣವಾಗಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಇದರಲ್ಲಿ ಅನೇಕ ಇತ್ತೀಚಿನ ವೈಶಿಷ್ಟಗಳಾದ ಶೆಡ್ಯೂಲ್ ರೆಕಾರ್ಡಿಂಗ್, ಯುಎಸ್‌ಬಿ ಪೋರ್ಟ್ ಮೊದಲಾದ ಆಯ್ಕೆಗಳಿರುವ ಕುರಿತು ಹೇಳಲಾಗುತ್ತಿದೆ. ನಿಮಗೂ ಈ ಕೊಡುಗೆಯನ್ನು ಬುಕಿಂಗ್ ಮಾಡಬೇಕು ಎನಿಸಿದರೆ ರಿಲಾಯನ್ಸ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿನೀಡುವ ಮೂಲಕ ಈ ಲಾಭವನ್ನು ಪಡೆಯಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ