ಕೆಲವರು ಉಪ್ಪು ಅಥವಾ ಉಪ್ಪಿನಂಶದ ತಿಂಡಿಯನ್ನು ತಿನ್ನಲು ಹೆಚ್ಚು ಆಸೆಪಡುತ್ತಾರೆ. ಯಾಕೆ ಗೊತ್ತಾ?

ಶುಕ್ರವಾರ, 29 ಮಾರ್ಚ್ 2019 (09:51 IST)
ಬೆಂಗಳೂರು : ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ ತಿನ್ನಬೇಕೆನ್ನಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ.

*ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ, ನಿಮ್ಮ ದೇಹದಲ್ಲಿ ಕ್ರೋಮಿಯಂ ಅಂಶ ಕಡಿಮೆಯಿದೆ ಎಂದು ಅರ್ಥ.

*ಚಾಕೋಲೆಟ್ ತಿನ್ನಬೇಕೆಂದು ಆಸೆಯಾದರೆ, ಮೆಗ್ನೀಷಿಯಂ ಪ್ರಮಾಣ ಕಡಿಮೆಯಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಿ.

*ಉಪ್ಪು ಅಥವಾ ಉಪ್ಪಿನಂಶದ ತಿಂಡಿ ಬಯಸಿದರೆ ಸೋಡಿಯಂ ಕಡಿಮೆಯಾಗಿದೆ ಎಂಬುದು ಸ್ಪಷ್ಟ.

*ಕಬ್ಬಿಣದ ಅಂಶ ಕಡಿಮೆ ಇದ್ದರೆ ನಾಲಿಗೆ ಮಾಂಸದ ಆಹಾರ ಸೇವಿಸಲು ಇಚ್ಛಿಸುತ್ತದೆ.

*ಮಸಾಲೆಯುಕ್ತ ಪದಾರ್ಥ ತಿನ್ನುವಂತಾದರೆ, ನಿಮ್ಮ ಹೊಟ್ಟೆಯಲ್ಲೇನೋ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ