ವಿವೋ X21, ವಿವೋ V9 , ವಿವೋ Y83 ಮೊಬೈಲ್‌ಗಳ ದರ ಕಡಿತಗೊಳಿಸಿದ ವಿವೋ

ಮಂಗಳವಾರ, 28 ಆಗಸ್ಟ್ 2018 (13:53 IST)
ಭಾರತದ ಮಾರುಕಟ್ಟೆಯಲ್ಲಿ ವಿವೋ ಇಂಡಿಯಾ ತನ್ನ ವಿವೋ V9, ವಿವೋ Y83 ಮತ್ತು ವಿವೋ X21 ಮೊಬೈಲ್‌ಗಳ ಬೆಲೆಯ ಕಡಿತವನ್ನು ಜಾರಿಗೊಳಿಸಿದೆ. ಈ ಸ್ಮಾರ್ಟ್ ಫೋನ್‌ಗಳು ಇನ್ನು ಮುಂದೆ ಹೊಸ ಮಾರುಕಟ್ಟೆ ಆಪರೇಟಿವ್ ಬೆಲೆಯಲ್ಲಿ ಮಾರಾಟವಾಗಲಿದ್ದು ಅವುಗಳ ಬೆಲೆ ಸುಮಾರು 4000 ದಷ್ಟು ಕಡಿಮೆಯಾಗಲಿದೆ. ವಿವೋ X21 31,990 ರೂಪಾಯಿ, ವಿವೋ V9 18,999 ರೂಪಾಯಿ ಮತ್ತು ವಿವೋ Y83 13,990 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ವಿವೋ V9 ಈ ವರ್ಷದ ಮಾರ್ಚ್‌ನಲ್ಲಿ ಲಾಂಚ್ ಆಗಿದ್ದು ಇದರ ಬೆಲೆ 22,990 ರೂಪಾಯಿಗಳಾಗಿತ್ತು. 4 ಜಿಬಿ/64 ಜಿಬಿ ರಾಮ್‌ಗಳ ಸಂಗ್ರಹಣಾ ಸ್ಥಳವನ್ನು ಹೊಂದಿದ್ದು ಇದು ಗೋಲ್ಡ್, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದೆ. 6.3-ಇಂಚ್ IPS LCD ಪೂರ್ಣ ವೀಕ್ಷಣೆಯ ಪ್ರದರ್ಶನದ ಜೊತೆಗೆ ವಿವೋ V9 ಪೂರ್ಣ ಹೆಚ್‌ಡಿ+ ರೆಸಲ್ಯೂಶನ್ (2280x1080 ಪಿಕ್ಸೆಲ್‌ಗಳು) ಅನ್ನು ಹೊಂದಿದೆ. ಇದು ಒಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 SoC ಶಕ್ತಿಯನ್ನು ಹೊಂದಿದೆ ಮತ್ತು 6 ಜಿಬಿ ರಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿದ್ದು 256 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ. ಇತ್ತೀಚಿನ ಆಂಡ್ರಾಯ್ಡ್ 8.1 ಒರಿಯೊ-ಆಧಾರಿತವಾಗಿದೆ ಮತ್ತು 3260 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈಗ ಇದು 18,999 ರೂಪಾಯಿಗಳಲ್ಲಿ ಲಭ್ಯವಿದೆ.
 
ಡಿಸ್‌ಪ್ಲೇನಲ್ಲಿ ಫಿಂಗರ್‌ ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ ಫೋನ್‌ಗಳಲ್ಲಿ ವಿವೋ X21 ಒಂದಾಗಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಮೇ ತಿಂಗಳಲ್ಲಿ 35,990 ರೂಪಾಯಿಗಳಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ನೀವು ಇದನ್ನು ಕೇವಲ 31,990 ರೂ.ಗಳಿಗೆ ಖರೀದಿಸಬಹುದಾಗಿದೆ. ವಿವೋ X21 6.28 ಇಂಚ್ ಫುಲ್ ಹೆಚ್‌ಡಿ+ ಸೂಪರ್ AMOLED ಡಿಸ್‌ಪ್ಲೇ ಜೊತೆಗೆ 2280x1080 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 SoC ಶಕ್ತಿಯನ್ನು ಹೊಂದಿದೆ ಮತ್ತು 6 ಜಿಬಿ ರಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿದ್ದು 256 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ.
 
ವಿವೋ Y83 ಬಿಡುಗಡೆ ಸಮಯದಲ್ಲಿ 14,990 ರೂ.ಗಳಿಗೆ ಲಭ್ಯವಿದ್ದು ಈಗ 13,990 ರೂ.ಗಳಿಗೆ ಲಭ್ಯವಿದೆ. ವಿವೋ Y83 720x1520 ಪಿಕ್ಸೆಲ್ ರೆಸೆಲ್ಯೂಷನ್ ಜೊತೆಗೆ 6.22 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ. ಇದು ಒಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ P20 ಪ್ರೊಸೆಸರ್‌ ಅನ್ನು ಹೊಂದಿದ್ದು ಅದರೊಂದಿಗೆ 4 ಜಿಬಿ ರಾಮ್ ಮತ್ತು 32 ಜಿಬಿ ಆಂತರಿಗ ಸಂಗ್ರಹವನ್ನು ಹೊಂದಿದೆ. ಇದರ ಸಂಗ್ರಹವನ್ನು ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾಗಿದೆ.
 
ನೀವು ಈಗಾಗಲೇ ಹೊಸ ಮೊಬೈಲ್ ಅನ್ನು ಖರೀದಿಸುವ ಯೋಚನೆಯಲ್ಲಿದ್ದರೆ ವಿವೋ ನಿಮಗೆ ಅತ್ಯುತ್ತಮವಾದ ಕೊಡುಗೆಯನ್ನು ನೀಡಿದೆ. ಇತ್ತೀಚೆಗೆ ಭಾರತದ ಮಾರುಕಟ್ಟೆಗೆ ಬಂದಿರುವ ಮೊಬೈಲ್‌ಗಳ ಬೆಲೆಯನ್ನು ಸುಮಾರು 4000 ರೂ.ಗಳಷ್ಟು ಕಡಿತಗೊಳಿಸಿದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹಾಗೂ ನಿಮ್ಮ ಮೊಬೈಲ್‌ನಲ್ಲಿ ನೀವು ಬಯಸುವ ವೈಶಿಷ್ಟ್ಯಗಳಿಗೆ ಅನುಗುಣವಾಗಿ ನೀವು ವಿವೋ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ