ಗ್ರಾಹಕರಿಗಾಗಿ ವೊಡಾಫೋನ್ ಬಿಡುಗಡೆ ಮಾಡಿದೆ 'ಆಲ್‌ ರೌಂಡರ್‌’ ಪ್ರಿಪೇಯ್ಡ್​ ಪ್ಯಾಕ್

ಸೋಮವಾರ, 30 ಸೆಪ್ಟಂಬರ್ 2019 (09:53 IST)
ನವದೆಹಲಿ : ವೊಡಾಫೋನ್ ಕಂಪೆನಿಯು ತನ್ನ ಗ್ರಾಹಕರಿಗಾಗಿ ಹೊಸ 'ಆಲ್‌ ರೌಂಡರ್‌’ ಪ್ರಿಪೇಯ್ಡ್​ ಪ್ಯಾಕ್ ​​​'ಗಳನ್ನು ಬಿಡುಗಡೆ ಮಾಡಿದೆ.



ಈ ‘ಆಲ್‌ ರೌಂಡರ್‌’ ಪ್ಲಾಕ್​​ನಲ್ಲಿ 15 ರೂ. ವಿನಿಂದ ಹಿಡಿದು 245 ರೂ. ವರೆಗಿನ ಪ್ಲಾನ್​​​ಗಳನ್ನು ಹೊಂದಿದೆ. ಗ್ರಾಹಕರು ನಮಗೆ ಬೇಕಾದಂತಹ ಪ್ಲಾನ್ ನ್ನು ರಿಚಾರ್ಜ್ ಮಾಡಬಹುದು.

 

* ವೊಡಾಫೋನ್‌ನ 15.ರೂ.ವಿನ ಆಲ್​ ರೌಂಡರ್ ಪ್ಲಾನ್​ನಲ್ಲಿ ಲೋಕಲ್, ನ್ಯಾಷನಲ್ ಕರೆಯನ್ನು ಉಚಿತವಾಗಿ ನೀಡುತ್ತಿದೆ. ಆದರೆ ಗ್ರಾಹಕರು ರೋಮಿಂಗ್ ಕರೆಗಳಿಗೆ ಮಾತ್ರ ಪ್ರತಿ ನಿಮಿಷಕ್ಕೆ 30 ಪೈಸಾ ಜಾರ್ಚ್​ ನೀಡಬೇಕಿದೆ. ಈ ಪ್ಲಾನ್​ 3 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

 

* ವೊಡಾಫೋನ್​ 29.ರೂ. ವಿನ ಆಲ್  ​ರೌಂಡರ್​ ಪ್ಲಾನ್ ನಲ್ಲಿ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಚಾರ್ಜ್‌ ಪ್ರತಿ ನಿಮಿಷಕ್ಕೆ 30ಪೈಸೆಗೆ ಸಿಗಲಿದೆ. ಈ ಪ್ಲಾನ್​ 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

 

*35 ರೂ.ವಿನ ಆಲ್ ​ರೌಂಡರ್​ ಪ್ಲಾನ್​ನಲ್ಲಿ 26 ರೂ. ಉಚಿತ ಟಾಕ್‌ ಟೈಮ್‌ ಸಿಗಲಿದೆ. ಜೊತೆಗೆ 100MB ಡೇಟಾ ಸಿಗಲಿದೆ. ಮಾತ್ರವಲ್ಲದೆ, ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಪ್ರತಿ ನಿಮಿಷಕ್ಕೆ ಒಂದು ಪೈಸಾದಂತೆ ಕಡಿತವಾಗಲಿದೆ.

 

*39 ರೂ. ವಿನ ಆಲ್ ​ರೌಂಡರ್​ ಪ್ಲಾನ್​ನಲ್ಲಿ 30.ರೂ ಟಾಕ್‌ ಟೈಮ್‌ ದೊರೆಯಲಿದೆ. ಜೊತೆಗೆ 100MB ಡೇಟಾಉಚಿತವಾ ಸಿಗಲಿದೆ. ಇದೇ ರೀತಿ 45 ರೂ.ಗಳ ಪ್ಲಾನ್​ ನಲ್ಲಿಯೂ ಸಹ 100MB ಡೇಟಾ ಪ್ರಯೋಜನೆ ಉಚಿತವಾಗಿ ನೀಡುತ್ತಿದೆ. ಇದರಲ್ಲಿ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಪ್ರತಿ ನಿಮಿಷಕ್ಕೆ ಒಂದು ಪೈಸಾದಂತೆ ಕಡಿತವಾಗಲಿದೆ.

 

* ವೊಡಾಫೋನ್​ 65 ರೂ. ಪ್ಲಾನ್​ನಲ್ಲಿ 55 ರೂ.ವಿನ ಟಾಕ್‌ ಟೈಮ್‌ ಜೊತೆಗೆ ಪ್ರತಿ ನಿಮಿಷಕ್ಕೆ 60ಪೈಸೆಯಂತೆ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳಿಗೆ ಲಭ್ಯವಾಗಲಿವೆ. ಇದರೊಂದಿಗೆ 200MB ಡೇಟಾ ಸಿಗಲಿದೆ.

 

*69 ರೂ.ಗಳ ಪ್ಲಾನ್​ನಲ್ಲಿ ಲೋಕಲ್ ಮತ್ತು ಎಸ್‌ ಟಿಡಿ ಸೇರಿ 150 ನಿಮಿಷ ಲಭ್ಯವಾಗಲಿದ್ದು, ಪ್ರತಿದಿನ 100 ಉಚಿತ ಎಸ್‌ಎಮ್‌ ಎಸ್‌ ಗಳು ಉಚಿತವಾಗಿ ಸಿಗಲಿವೆ. ಇದರೊಂದಿಗೆ 250MB ಡೇಟಾ ಸಿಗಲಿದೆ.

 

* ಇನ್ನು 95ರೂ. ಪ್ಲಾನ್​ನಲ್ಲಿ 500MB ಡೇಟಾ ಜೊತೆಗೆ ಲೋಕಲ್, ಪ್ರತಿ ನಿಮಿಷಕ್ಕೆ 60ಪೈಸಾದಲ್ಲಿ ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಮಾಡಬಹುದು. 28ದಿನಗಳ ವ್ಯಾಲಿಡಿಟಿ ಇರಲಿದೆ.

 

* ವೊಡಾಫೋನ್‌ 145ರೂ.ಪ್ಲಾನ್ ಅಳವಡಿಸಿಕೊಳ್ಳುವ ಗ್ರಾಹಕರಿಗೆ 1GB ಡೇಟಾ ಸಿಗಲಿದೆ. ಇದರೊಂದಿಗೆ ಪ್ರತಿ ನಿಮಿಷಕ್ಕೆ 30ಪೈಸಾದಲ್ಲಿ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಇರಲಿದೆ. ಈ ಪ್ಲಾನ್ 42ದಿನಗಳ ವ್ಯಾಲಿಡಿಟಿ ಹೊಂದಿದೆ.

 

*245ರೂ.ಗಳ ಪ್ಲಾನ್​ 84ದಿನಗಳ ವ್ಯಾಲಿಡಿಟಿ ಜೊತೆಗೆ 2GB ಡೇಟಾ ಸಿಗಲಿದೆ. ಇದರೊಂದಿಗೆ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಪ್ರತಿ ನಿಮಿಷಕ್ಕೆ 30ಪೈಸಾದಲ್ಲಿ ಇರಲಿವೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ