ಮೊಬೈಲ್​​ ನಲ್ಲಿ ವೈರಸ್​​ ಹರಡುವಂತಹ ಆರು ಆ್ಯಪ್​​ ಗಳು ಗೂಗಲ್ ಪ್ಲೇಸ್ಟೋರ್ ನಲ್ಲಿ ಪತ್ತೆ

ಗುರುವಾರ, 26 ಸೆಪ್ಟಂಬರ್ 2019 (07:04 IST)
ನವದೆಹಲಿ : ಮೊಬೈಲ್​​ ನಲ್ಲಿ ವೈರಸ್​​ ಹರಡುವಂತಹ ಆರು ಆ್ಯಪ್​​ ಗಳು ಪತ್ತೆಯಾಗಿದ್ದು, ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ಅವುಗಳನ್ನು ತೆಗೆದುಹಾಕಿದೆ ಎಂಬುದಾಗಿ ತಿಳಿದುಬಂದಿದೆ.500 ಮಿಲಿಯನ್​​ ಗಿಂತಲೂ ಹೆಚ್ಚು ಬಳಕೆದಾರರು ಈ ಆ್ಯಪ್​​ ಗಳನ್ನು ಡೌನ್‌ ಲೋಡ್ ಮಾಡಿದ್ದಾರೆ. ಅಲ್ಲದೇ ಈ ಆ್ಯಪ್​​ ಗಳು ವೈರಸ್ ಹರಡುವುದರ ಜೊತೆಗೆ ಫೋನ್‌ ಬ್ಯಾಟರಿ ಚಾರ್ಜ್​​ ಬೇಗ ಖಾಲಿಯಾಗುದಕ್ಕೆ ಕಾರಣವಾಗುತ್ತಿದ್ದವು. ಅಲ್ಲದೇ ಬ್ಯಾಗ್ರೌಂಡ್‌ ನಲ್ಲಿ ತಮ್ಮ ಸರ್ವರ್ ಜತೆಗೆ ನಿರಂತರ ಸಂಪರ್ಕ ಹೊಂದಿದ್ದವು ಎನ್ನಲಾಗುತ್ತಿದೆ.

 

ಈ ಆರು ಆ್ಯಪ್​​ ಗಳ ಪೈಕಿ ನಾಲ್ಕು  ಆ್ಯಪ್​​  ಗಳಾದ ಹಾಟ್​​ ಸ್ಪಾಟ್​​ ವಿಪಿಎನ್​​​, ಫ್ರೀ ವಿಪಿಎನ್​​​ ಮಾಸ್ಟರ್​​, ಸೆಕ್ಯೂರ್​​ ವಿಪಿಎನ್​​, ಸಿಎಂ ಸೆಕ್ಯೂರಿಟಿ ಆ್ಯಪ್​​ ​ ಲಾಕ್ ವಿಪಿಎನ್​​ ಸಂಸ್ಥೆಗೆ ಸೇರಿವೆ. ಇದರ ಜೊತೆಗೆ  ಇನ್ನುಳಿದ ಎರಡು ಸನ್​​ ಪ್ರೋ ಬ್ಯೂಟಿ ಕ್ಯಾಮರಾ, ಫನ್ನೀ ಸ್ವೀಟ್​ ಬ್ಯೂಟಿ ಸೆಲ್ಫಿ ಎಂಬ ಆ್ಯಪ್​​  ​​ಗಳನ್ನು ಗೂಗಲ್ ಡಿಲೀಟ್​ ಮಾಡಿದೆ ಎನ್ನಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ