ವೊಡಾಫೋನ್ ಬಿಡುಗಡೆ ಮಾಡಿದೆ 45 ರೂ.ವಿನ ಹೊಸ ಪ್ರಿಪೇಯ್ಡ್ ಪ್ಲಾನ್​​​

ಗುರುವಾರ, 3 ಅಕ್ಟೋಬರ್ 2019 (09:10 IST)
ನವದೆಹಲಿ : ವೊಡಾಫೋನ್​ ಟೆಲಿಕಾಂ ಸಂಸ್ಥೆ ಗ್ರಾಹಕರಿಗಾಗಿ 45 ರೂ.ವಿನ ಹೊಸ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​​​ ಅನ್ನು ಬಿಡುಗಡೆ ಮಾಡಿದೆ.ವೊಡಾಫೋನ್​ ನ 45 ರೂ.ವಿನ ಹೊಸ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್ ನಲ್ಲಿ ಲೋಕಲ್​, ನ್ಯಾಷನಲ್ ​ಕರೆ ಸಿಗಲಿದ್ದು, ಜೊತೆಗೆ ಪ್ರತಿ ಕರೆಯ ಮೇಲೆ 1 ಪೈಸೆಯಷ್ಟು ವೆಚ್ಚವನ್ನು ಭರಿಸಲಿದೆ. ಅಲ್ಲದೇ ಗ್ರಾಹಕರಿಗೆ 4G,3G, 2G ನೆಟ್​ವರ್ಕ್​ನಡಿಯಲ್ಲಿ 100MB​ ಡೇಟಾವನ್ನು ಉಚಿತವಾಗಿ ನೀಡುತ್ತಿದೆ.


ಈ ಹೊಸ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅಸ್ಸಾಂ, ಬಿಹಾರ್​, ಜಾರ್ಖಂಡ್​, ಮುಂಬೈ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಜೊತೆಗೆ ಫುಲ್​ಟಾಕ್​ ಟೈಮ್​ ನೀಡುತ್ತಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ