ಅಮಾನ್ಯಗೊಂಡ 500, 1000 ರೂ. ನೋಟುಗಳು ಏನಾದವು ಗೊತ್ತಾ?!
ನೋಟು ಅಮಾನ್ಯಗೊಂಡ ಬಳಿಕ ಜನರು ತಮ್ಮ ಬಳಿಯಿದ್ದ ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕ್ ಗಳ ಮೂಲಕ ಬದಲಿ ಪಡೆದುಕೊಳ್ಳಬೇಕಿತ್ತು. ಅದರಂತೆ ಸರ್ಕಾರ ಈ ಕಾರ್ಯದಲ್ಲಿ ಯಶಸ್ವಿಯಾಗಿದೆಯೇ? ಈ ಪ್ರಶ್ನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರಿಸಿದೆ.
ಆರ್ ಬಿಐ ಪ್ರಕಾರ ಅಮಾನ್ಯಗೊಂಡ ನೋಟುಗಳ ಪೈಕಿ ಶೇ. 99.3 ನೋಟುಗಳು ಮರಳಿ ಬ್ಯಾಂಕ್ ಗೆ ಪಾವತಿಯಾಗಿದೆಯಂತೆ. ನೋಟು ಅಮಾನ್ಯಗೊಳಿಸುವ ಆದೇಶ ನೀಡಿದಾಗ ಇಂತಹ ನಿಷೇಧಿತ ನೋಟುಗಳು 15.41 ಲಕ್ಷ ಕೋಟಿ ರೂ. ಚಲಾವಣೆಯಾಗಿದ್ದವು. ಅವುಗಳ ಪೈಕಿ ಇದೀಗ 15.31 ಲಕ್ಷ ಕೋಟಿ ರೂ. ಮರಳಿವೆ. ಕೇವಲ 10,720 ಕೋಟಿ ಹಣ ಮರಳಿ ಬಂದಿಲ್ಲ. ಹಾಗಿದ್ದರೂ ಬಹುಪಾಲು ಹಣವನ್ನು ಮರಳಿ ಪಡೆಯಲಾಗಿದೆ ಎಂದು ಆರ್ ಬಿಐ ಹೇಳಿಕೊಂಡಿದೆ.