ಗೋವುಗಳ ವ್ಯವಹಾರದಿಂದ ದೂರವಿರಿ ಎಂದು ಮುಸ್ಲಿಮರಿಗೆ ಅಜಂ ಖಾನ್ ಮನವಿ ಮಾಡಿದ್ದೇಕೆ?
ಬುಧವಾರ, 25 ಜುಲೈ 2018 (13:38 IST)
ರಾಮಪುರ : ತಮ್ಮ ಮುಂದಿನ ಪೀಳಿಗೆಯ ಸುರಕ್ಷತೆಯಾಗಿ ಮುಸ್ಲಿಮರು ಡೇರಿ ಉದ್ಯಮ ಹಾಗೂ ಗೋವುಗಳ ವ್ಯಾಪಾರದಿಂದ ದೂರವಿರುವುದು ಉತ್ತಮವೆಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಮುಸ್ಲಿಮರಿಗೆ ಸಲಹೆ ನೀಡಿದ್ದಾರೆ.
ಗೋವುಗಳ ಕಳ್ಳಸಾಗಣೆ ಅನುಮಾನದಲ್ಲಿ ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಈ ಘಟನೆಯಿಂದ ಈಗಾಗಲೇ ಕೆಲವರು ಮೃತಪಟ್ಟಿದ್ದರು. ಇದನ್ನು ಮನಗೊಂಡ ಅಜಂ ಖಾನ್ ಅವರು ಮುಸ್ಲಿಮರ ಹಿತದೃಷ್ಟಿಯಿಂದ ಈ ರೀತಿಯಾಗಿ ಹೇಳಿದ್ದಾರೆ.
'ಡೇರಿ ಉದ್ಯಮ ಮತ್ತು ಹಸುಗಳ ಮಾರಾಟ ವೃತ್ತಿಯಲ್ಲಿ ತೊಡಗಿರುವ ಮುಸ್ಲಿಮರು ತಮ್ಮ ಮುಂದಿನ ಪೀಳಿಗೆಯ ಸುರಕ್ಷತೆಯ ದೃಷ್ಟಿಯಿಂದ ಅವುಗಳನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ. ಗೋವುಗಳನ್ನು ಸುಮ್ಮನೆ ಮುಟ್ಟಿದರೂ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕೆಲವು ರಾಜಕಾರಣಿಗಳು ಹೇಳುತ್ತಿದ್ದಾರೆ ಹೀಗಿರುವಾಗ ಅಂತಹ ವ್ಯಾಪಾರದಿಂದ ಮುಸ್ಲಿಮರು ದೂರ ಇರುವುದೇ ಒಳಿತು' ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ