Ratan Tata:ರತನ್ ಟಾಟಾ ಬಳಿಕ ಟಾಟಾ ಮುಂದಿನ ಮುಖ್ಯಸ್ಥರು ಯಾರು

Krishnaveni K

ಶುಕ್ರವಾರ, 11 ಅಕ್ಟೋಬರ್ 2024 (11:14 IST)
ಮುಂಬೈ: ರತನ್ ಟಾಟಾ ನಿಧನದ ಬಳಿಕ ಟಾಟಾ ಸಂಸ್ಥೆಗೆ ಮುಖ್ಯಸ್ಥರು ಯಾರು ಎಂಬ ವಿಚಾರ ಈಗ ಭಾರೀ ಚರ್ಚೆಯಲ್ಲಿದೆ. ಮೂಲಗಳ ಪ್ರಕಾರ ಟಾಟಾ ಸಂಸ್ಥೆಗೆ ಮುಂದೆ ನೊಯೆಲ್ ಟಾಟಾ ಮುಖ್ಯಸ್ಥರು ಎಂಬ ಮಾತು ಕೇಳಿಬರುತ್ತಿದೆ.

ನೊಯೆಲ್ ಟಾಟಾ ಅವರು ರತನ್ ಟಾಟಾ ಅವರ ಸಹೋದರ ಸಂಬಂಧಿ. ಇದೀಗ ಟಾಟಾ ಸಂಸ್ಥೆಯ ಟ್ರೆಂಟ್ ಕಂಪನಿಯ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. 67 ವರ್ಷದ ಉದ್ಯಮಿ ಭಾರತೀಯ ಮೂಲದ ಐರಿಶ್ ನಿವಾಸಿ. ಸದ್ಯಕ್ಕೆ ಇವರ ಹೆಸರು ಟಾಟಾ ಮುಂದಿನ ಮುಖ್ಯಸ್ಥ ಸ್ಥಾನಕ್ಕೆ ಬಲವಾಗಿ ಕೇಳಿಬರುತ್ತಿದೆ.

ಟಾಟಾ ಕುಟುಂಬದವರಲ್ಲಿ ಸದ್ಯಕ್ಕೆ ಇವರೇ ಅತ್ಯಂತ ಅನುಭವಿ ಮತ್ತು ವಿಶ್ವಾಸಾರ್ಹ ವ್ಯಕ್ತಿ. ಟಾಟಾ ಅವಿವಾಹಿತರಾಗಿದ್ದರು. ಹೀಗಾಗಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ರತನ್ ಕುಟುಂಬದವರೆಲ್ಲರೂ ಉದ್ಯಮದಲ್ಲಿ ತೊಡಗಿಸಿಕೊಂಡವರೇ.

ಟಾಟಾ ಸಂಸ್ಥೆ ಕೇವಲ ಭಾರತದಲ್ಲಿ ಮಾತ್ರವಲ್ಲ, 100 ದೇಶಗಳಲ್ಲಿ ಟಾಟಾ ಕಂಪನಿಯ ಶಾಖೆಗಳು ತೆರೆದುಕೊಂಡಿವೆ. ಇಷ್ಟು ದೊಡ್ಡ ಸಾಮ್ರಾಜ್ಯಕ್ಕೆ ಈಗ ನೊಯೆಲ್ ಟಾಟಾ ಮುಖ್ಯಸ್ಥರಾಗುವ ಸಾಧ್ಯತೆಯಿದೆ. ರತನ್ ರಷ್ಟು ನೊಯೆಲ್ ಖ್ಯಾತಿ ಪಡೆದಿಲ್ಲವಾದರೂ ಉದ್ಯಮದಲ್ಲಿ ಅವರೂ ಪಳಗಿದವರೇ. ಜೊತೆಗೆ ಅನುಭವಿಯೂ ಆಗಿರುವುದರಿಂದ ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಅವರೇ ಮುನ್ನಡೆಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ