ಶತಕ ಬಾರಿಸಿದ ಟೊಮೆಟೊ ದರ: ಹೀಗಾಗುತ್ತಿರುವುದು ಎರಡನೇ ಬಾರಿ

Krishnaveni K

ಬುಧವಾರ, 9 ಅಕ್ಟೋಬರ್ 2024 (11:53 IST)
ಬೆಂಗಳೂರು: ಈರುಳ್ಳಿ, ಬೆಳ್ಳುಳ್ಳಿ ಬಳಿಕ ಈಗ ಟೊಮೆಟೊ ದರ ಗಗನಕ್ಕೇರಿದೆ. ಜನರು ಹೆಚ್ಚು ಬಳಕೆ ಮಾಡುವ ಟೊಮೆಟೊ ಈಗ ಶತಕದ ಅಂಚಿಗೆ ಬಂದು ತಲುಪಿದೆ. ಈ ವರ್ಷ ಹೀಗಾಗುತ್ತಿರುವುದು ಇದು ಎರಡನೇ ಬಾರಿ.

ಕಳೆದ ಕೆಲವು ಸಮಯದಿಂದ ಗ್ರಾಹಕರು ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದಾರೆ. ನಿತ್ಯ ಬಳಕೆ, ಹಾಲು, ದಿನಸಿ, ತರಕಾರಿ ಬೆಲೆ ಹೆಚ್ಚಾಗಿರುವಾಗ ದೈನಂದಿನ ಬದುಕು ಕಷ್ಟವಾಗಿದೆ. ಇದರ ನಡುವೆ ಈಗ ಹೆಚ್ಚಾಗಿ ಬಳಕೆ ಮಾಡುವ ಟೊಮೆಟೊ ದರ 100 ಕ್ಕೆ ಬಂದು ತಲುಪಿದೆ.

ಬೆಳ್ಳುಳ್ಳಿ ದರ ಈಗಾಗಲೇ 400 ರೂ. ದಾಟಿದೆ. ಇದೀಗ ಟೊಮೆಟೊ ದರವೂ ಕೆಜಿಗೆ 100 ರೂ.ಗೆ ಬಂದು ನಿಂತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲವು ಸಮಯದಿಂದ 40-50 ರೂ.ಗಳ ಗಡಿಯಲ್ಲಿರುತ್ತಿದ್ದ ಟೊಮೆಟೊ ದರ ಈಗ 100 ಕ್ಕೆ ಬಂದು ನಿಂತಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಭಾರೀ ಮಳೆಯಿಂದಾಗಿ ಬೆಳೆ ನಷ್ಟವಾಗಿದೆ. ಇದರಿಂದಾಗಿ ಟೊಮೆಟೊ ಸಾಕಷ್ಟು ಪೂರೈಕೆಯಾಗುತ್ತಿಲ್ಲ. ದಿಡೀರ್ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿರುವುದರಿಂದ ಟೊಮೆಟೊ ದರದಲ್ಲಿ ಭಾರೀ ಏರಿಕೆಯಾಗಿದೆ. ಕೆಲವು ದಿನಗಳವರೆಗೆ ಈ ದರ ಮುಂದುವರಿಯುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ