ಸಾವಿರಾರು ಅಪ್ಲಿಕೇಶನ್‌ ಗಳನ್ನು ಫೇಸ್​ ಬುಕ್ ಸ್ಥಗಿತಗೊಳಿಸಿದ್ದೇಕೆ?

ಮಂಗಳವಾರ, 24 ಸೆಪ್ಟಂಬರ್ 2019 (07:56 IST)
ನವದೆಹಲಿ : ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಸಾವಿರಾರು ಅಪ್ಲಿಕೇಶನ್‌ ಗಳನ್ನು ಸ್ಥಗಿತಗೊಳಿಸಿರುವುದಾಗಿ ಎಂದು ಫೇಸ್​ ಬುಕ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.




ಮಾರ್ಚ್ 2018 ರಲ್ಲಿ ನಡೆದ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ಬಳಿಕ ಗೌಪ್ಯತೆಯನ್ನು ಉಳಿಸಿಕೊಳ್ಳಲು ಫೇಸ್ ಬುಕ್ ಈ ಕ್ರಮಗಳನ್ನು ಕೈಗೊಂಡಿದ್ದು, ಕಂಪನಿಯು ಪ್ರಾರಂಭಿಸಿದ ಡೇಟಾವನ್ನು ಡೆವಲಪರ್‌ ಗಳು ಹೇಗೆ ಬಳಸುತ್ತಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಇದರ ಭಾಗವಾಗಿ ಆಯಪ್​ ಗಳನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ.


‘ನಮ್ಮ ಕೋರಿಕೆಗೆ ಸ್ಪಂದಿಸದ ಹಾಗೂ ಮಾಹಿತಿ ನೀಡದ ಆಯಪ್ ​ಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ’ ಎಂದು ಫೇಸ್‌ಬುಕ್ ಉಪಾಧ್ಯಕ್ಷ ಇಮ್ ಆರ್ಚಿ ಬಾಂಗ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ