ರಾಫೆಲ್ ದರದಲ್ಲಿ ಒಂದು ತೇಜಸ್ ಪ್ಲಸ್ ಸುಕೋಯಿ ಖರೀದಿಸಬಹುದು: ಪರಿಕ್ಕರ್

ಶುಕ್ರವಾರ, 20 ಮೇ 2016 (19:32 IST)
ರಾಫೆಲ್ ಫೈಟರ್ ವಿಮಾನದ ಭಾರೀ ದರದ ಬಗ್ಗೆ ಮೊದಲ ಬಾರಿಗೆ ಬಾಯಿಬಿಟ್ಟಿರುವ ರಕ್ಷಣಾ ಸಚಿವ ಮನೋಹ ಪರಿಕ್ಕರ್  ಒಂದು ರಾಫೆಲ್‌ಗೆ ಅಗತ್ಯವಾದ ಹಣದಲ್ಲಿ ದೇಶೀಯ ವಿಮಾನ ತೇಜಸ್ ಮತ್ತು ರಷ್ಯಾದ ಸುಕೋಯಿ  ಎಸ್‌ಯು -30 ವಿಮಾನಗಳನ್ನು ಖರೀದಿಸಬಹುದು ಎಂದು ಹೇಳಿದ್ದಾರೆ. 
 
 ಫ್ರಾನ್ಸ್ ರಾಫೇಲ್ ಜತೆ ದೇಶೀಯ ಹಗುರ ಯುದ್ಧ ವಿಮಾನವನ್ನು ಹೋಲಿಸಿದ ಪರಿಕ್ಕರ್,  ಏವಿಯಾನಿಕ್ಸ್, ಎಲೆಕ್ಟ್ರಾನಿಕ್ಸ್‌‌ಗೆ ಸಂಬಂಧಿಸಿದಂತೆ ತೇಜಸ್ ವಿಮಾನವು ರಾಫೆಲ್‌ನಷ್ಟೇ ಉತ್ತಮವಾಗಿದೆ ಎಂದು ವಿಶ್ಲೇಷಿಸಿದರು.

ಫ್ರಾನ್ಸ್‌ನಿಂದ ರಾಫೇಲ್ ಯುದ್ಧ ವಿಮಾನಗಳನ್ನು ಭಾರತ ಖರೀದಿಸುತ್ತಿದ್ದು,  ಆಲ್ ಇಂಡಿಯಾ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಪರಿಕ್ಕರ್ ರಾಫೇಲ್ ದರದ ಬಗ್ಗೆ ತಮ್ಮ ಪರಿಕಲ್ಪನೆಯನ್ನು ಬಿಚ್ಚಿಟ್ಟರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ