ಅಂತರ್ಜಾಲದಲ್ಲಿ ಸಾಕಷ್ಟು ಹಿಟ್ ಆಗುತ್ತಿದೆ ಲವ್ ಸ್ಟೋರಿ ‘ಸಾರಂಗಾ ದರಿಯಾ’ ಸಾಂಗ್

ಶುಕ್ರವಾರ, 2 ಏಪ್ರಿಲ್ 2021 (10:40 IST)
ಹೈದರಾಬಾದ್ : ತಮಿಳು ನಟ ಧನುಷ್ ಅಭಿನಯದ ಆ್ಯಕ್ಷನ್ ಮತ್ತು ರೊಮ್ಯಾಂಟಿಕ್ ಚಿತ್ರ ‘ಮಾರಿ 2’ ನ ರೌಡಿ ಬೇಬಿ ಸಾಂಗ್ ಸೂಪರ್ ಹಿಟ್ ಆದ ಬಳಿಕ ಇದೀಗ ಸಾಯಿ ಪಲ್ಲವಿ ನಟಿಸಿದ ಮತ್ತೊಂದು ಚಿತ್ರದ ಹಾಡು ಅಂತರ್ಜಾಲದಲ್ಲಿ  ಸಾಕಷ್ಟು ಹಿಟ್ ಆಗುತ್ತಿದೆ ಎನ್ನಲಾಗಿದೆ.

ಶೇಖರ್ ಕಮ್ಮುಲಾ ಅವರ ನಿರ್ದೇಶನದ ಲವ್ ಸ್ಟೋರಿ ಚಿತ್ರದಲ್ಲಿ ನಾಗ ಚೈತನ್ಯ  ಮತ್ತು ಸಾಯಿ ಪಲ್ಲವಿ ನಟಿಸಿದ್ದಾರೆ.  ಇದರಲ್ಲಿ ಬರುವ ‘ಸಾರಂಗಾ ದರಿಯಾ’   ಸಾಂಗ್ ನ್ನು ಸಂಪೂರ್ಣವಾಗಿ ಸಾಯಿ ಪಲ್ಲವಿ ಅವರ ಮೇಲೆ ಚಿತ್ರೀಕರಿಸಲಾಗಿದ್ದು, ಇದರಲ್ಲಿ ಅವರು ತಮ್ಮ ನೃತ್ಯ ಕಲೆಯನ್ನು ತೋರಿಸಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ತೆಲುಗು ಚಲನಚಿತ್ರೋದ್ಯಮದಲ್ಲಿ  ‘ಸಾರಂಗಾ ದರಿಯಾ’ ಹಾಡು 100 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ . ಇದರಿಂದಾಗಿ ಈ ಹಾಡು ದಾಖಲೆ ಸೃಷ್ಟಿಸಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ