ಮಗಳ ಮದುವೆ ನೆರವೇರಿಸಿದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್
ಖತೀಜಾ ಮತ್ತು ರಿಯಾಸ್ದೀನ್ ಶೇಖ್ ಮೊಹಮ್ಮದ್ ವಿವಾಹ ಸರಳವಾಗಿ ನೆರವೇರಿದೆ. ಕೇವಲ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಸೌಂಡ್ ಎಂಜಿನಿಯರ್ ಆಗಿರುವ ರಿಯಾಸ್ದೀನ್ ಕೂಡಾ ಎ.ಆರ್ ರೆಹಮಾನ್ ಜೊತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವು ದಿನಗಳ ಮೊದಲು ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು.