ಐಪಿಎಲ್ 2022: ಹೈದರಾಬಾದ್ ಮಣಿಸಿದ ಡೆಲ್ಲಿ
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಡೇವಿಡ್ ವಾರ್ನರ್ 92, ರೋವ್ಮಾನ್ ಪೊವೆಲ್ 67 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಆಡನ್ ಮಾರ್ಕರಮ್ 42, ನಿಕಲಸ್ ಪೂರನ್ 62, ರಾಹುಲ್ ತ್ರಿಪಾಟಿ 22 ರನ್ ಗಳಿಸಿದರು.