ತಿರುಪತಿಯಲ್ಲಿ ಇಂದು ಆದಿಪುರುಷ್ ಅದ್ಧೂರಿ ಪ್ರಿ ರಿಲೀಸ್ ಈವೆಂಟ್

ಮಂಗಳವಾರ, 6 ಜೂನ್ 2023 (08:30 IST)
Photo Courtesy: Twitter
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಇಂದು ತಿರುಪತಿಯಲ್ಲಿ ನಡೆಯಲಿದೆ.

ಪ್ರಭಾಸ್ ಈ ಸಿನಿಮಾದಲ್ಲಿ ಶ್ರೀರಾಮಚಂದ್ರನ ಪಾತ್ರ ಮಾಡಿದ್ದಾರೆ. ಐತಿಹಾಸಿಕ ಕತೆಯುಳ್ಳ ಈ ಸಿನಿಮಾ ಮೇಲೆ ಪ್ರಭಾಸ್ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ಬಾಹುಬಲಿ ಸ್ಟಾರ್ ಗೆ ಆ  ಸಿನಿಮಾದ ಬಳಿಕ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಈ ಸಿನಿಮಾವಾದರೂ ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಜೂನ್ 16 ಕ್ಕೆ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. 500 ಕೋಟಿ ಬಜೆಟ್ ನ ಅದ್ಧೂರಿ ಸಿನಿಮಾವಿದು. ಕೃತಿ ಸನನ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ