ವಿಶೇಷ ಟೀಸರ್ ಮೂಲಕ ಪ್ರಶಾಂತ್ ನೀಲ್ ಗೆ ಬರ್ತ್ ಡೇ ಗಿಫ್ಟ್ ಕೊಟ್ಟ ಸಲಾರ್ ಟೀಂ

ಭಾನುವಾರ, 4 ಜೂನ್ 2023 (17:14 IST)
Photo Courtesy: Twitter
ಹೈದರಾಬಾದ್: ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಜನ್ಮದಿನಕ್ಕೆ ಅವರು ಇದೀಗ ನಿರ್ದೇಶಿಸುತ್ತಿರುವ ಸಲಾರ್ ತಂಡದ ಕಡೆಯಿಂದ ವಿಶೇಷ ಬರ್ತ್ ಡೇ ಟೀಸರ್ ಬಿಡುಗಡೆ ಮಾಡಲಾಗಿದೆ.

ಕೆಜಿಎಫ್ ಮತ್ತು ಸಲಾರ್ ಎರಡೂ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಪ್ರಶಾಂತ್ ನೀಲ್ ಜನ್ಮದಿನಕ್ಕೆ ಸಲಾರ್ ಚಿತ್ರತಂಡ ಅವರು ಸೆಟ್ ನಲ್ಲಿ ಹೇಗಿರ್ತಾರೆ, ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಟೀಸರ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ.

ಸಲಾರ್ ಸಿನಿಮಾಗೆ ಪ್ರಭಾಸ್ ನಾಯಕ. ಈ ಸಿನಿಮಾವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಇದೂ ಕೂಡಾ ಕೆಜಿಎಫ್ ನಂತೇ ಆಕ್ಷನ್, ಥ್ರಿಲ್ಲರ್ ಸಿನಿಮಾವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ