ಒಂದೇ ಸಮಯಕ್ಕೆ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿರುವ ಜ್ಯೂ.ಎನ್ ಟಿಆರ್

ಶನಿವಾರ, 3 ಜೂನ್ 2023 (08:50 IST)
ಹೈದರಾಬಾದ್: ಜ್ಯೂ.ಎನ್ ಟಿಆರ್ ಈಗ ಅತೀ ಬೇಡಿಕೆಯ ನಟರಾಗಿದ್ದಾರೆ. ಕೇವಲ ಟಾಲಿವುಡ್ ಮಾತ್ರವಲ್ಲ, ಬಾಲಿವುಡ್ ನಲ್ಲೂ ತಾರಕ್ ಗೆ ಬೇಡಿಕೆಯಿದೆ.

ಹೀಗಾಗಿ ಈಗ ತಾರಕ್ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಪೈಕಿ ಎರಡು ಸಿನಿಮಾಗಳ ಶೂಟಿಂಗ್ ಒಟ್ಟಿಗೇ ನಡೆಯಲಿದೆ. ಪ್ರಶಾಂತ್ ನೀಲ್ ಜೊತೆಗಿನ ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾ ಇನ್ನಷ್ಟೇ ಆರಂಭವಾಗಬೇಕಿದೆ.

ಹಿಂದಿಯ ವಾರ್ 2, ತೆಲುಗಿನ ದೇವರ ಎಂಬ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಜ್ಯೂ.ಎನ್ ಟಿಆರ್ ಒಟ್ಟಿಗೇ ನಟಿಸುತ್ತಿದ್ದಾರೆ. ಇದಕ್ಕಾಗಿ ಅವರು ಈಗ ಕಠಿಣ ವರ್ಕೌಟ್ ನಡೆಸುತ್ತಿದ್ದಾರೆ. ವಾರ್ 2 ನಲ್ಲಿ ವಿಲನ್ ರೋಲ್ ಮಾಡುತ್ತಿದ್ದಾರೆ. ಇವೆರಡರ ಬಳಿಕ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ