ಪುಟಾಣಿ ಅಭಿಮಾನಿಗೆ ಮನಸೋತ ರಶ್ಮಿಕಾ ಮಂದಣ್ಣ

ಭಾನುವಾರ, 4 ಜೂನ್ 2023 (08:30 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳನ್ನು ಯಾವತ್ತೂ ನಿರಾಸೆ ಮಾಡಲ್ಲ. ಸೆಲ್ಫೀ ನೀಡುವುದಿರಲಿ, ಸೋಷಿಯಲ್ ಮೀಡಿಯಾ ಮೂಲಕವಿರಲಿ ರಶ್ಮಿಕಾ ಅಭಿಮಾನಿಗಳ ಪ್ರೀತಿಯನ್ನು ಪುರಸ್ಕರಿಸುತ್ತಾರೆ.

ಇದೀಗ ಪುಟಾಣಿ ಅಭಿಮಾನಿಯೊಬ್ಬರು ತಮ್ಮ ಮೇಲಿರುವ ಅಭಿಮಾನ ವ್ಯಕ್ತಪಡಿಸಿದ್ದನ್ನು ಗಮನಿಸಿದ ರಶ್ಮಿಕಾ ಸೋಷಿಯಲ್ ಮೀಡಿಯಾ ಮೂಲಕ ಪುಟಾಣಿ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಪುಟಾಣಿ ಹುಡುಗನೊಬ್ಬ ಊಟ ಮಾಡುವಾಗ ಟಿವಿಯಲ್ಲಿ ರಶ್ಮಿಕಾ ಡ್ಯಾನ್ಸ್ ಮೈಮರೆತು ನೋಡುತ್ತಾನೆ. ಆತನ ಮುಗ್ಧತೆಗೆ ಮನಸೋತ ರಶ್ಮಿಕಾ ಮಗುವಿನ ಕಣ್ಣು ನೋಡಿ. ಎಷ್ಟು ಮುಗ್ಥತೆಯಿದೆ. ಈ ಮಗುವಿಗೆ ದೇವರು ಸದಾ ಆರೋಗ್ಯ ನೀಡಲಿ’ ಎಂದು ಪ್ರಾರ್ಥಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ