ದಳಪತಿ ವಿಜಯ್ ಗೆ ಟೈಮ್ಸ್ ಸ್ಕ್ವೇರ್ ನಲ್ಲಿ ಗೌರವ

ಬುಧವಾರ, 21 ಜೂನ್ 2023 (16:16 IST)
Photo Courtesy: Twitter
ನ್ಯೂಯಾರ್ಕ್: ತಮಿಳು ಸ್ಟಾರ್ ನಟ ದಳಪತಿ ವಿಜಯ್ ಗೆ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನಲ್ಲಿ ಗೌರವ ಲಭಿಸಿದೆ. ಈ ಗೌರವ ಪಡೆದ ಮೂರನೇ ತಮಿಳು ನಟ ಎನಿಸಿಕೊಂಡಿದ್ದಾರೆ.

ನಾಳೆ ವಿಜಯ್ ಹುಟ್ಟುಹಬ್ಬವಿದ್ದು, ಇದಕ್ಕೆ ಮೊದಲು ಟೈಮ್ಸ್ ಸ್ಕ್ವೇರ್ ನಲ್ಲಿ ಗೌರವ ನೀಡಲಾಗಿದೆ. ಇಲ್ಲಿನ ಬಿಲ್ ಬೋರ್ಡ್ ನಲ್ಲಿ ವಿಜಯ್ ವಿಡಿಯೋ ಪ್ರದರ್ಶನವಾಗಿದೆ.

ಇದಕ್ಕೆ ಮೊದಲು ಆರ್. ಮಾಧವನ್ ರಾಕೆಟರಿ ಸಿನಿಮಾ ಪೋಸ್ಟರ್, ಧನುಷ್ ಈ ಗೌರವ ಪಡೆದಿದ್ದರು. ಸಂಗೀತ ನಿರ್ದೇಶಕ ಇಳಯರಾಜ ಕೂಡಾ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನ ಬಿಲ್ ಬೋರ್ಡ್ ನಲ್ಲಿ ಫೋಟೋ ಪ್ರದರ್ಶನಗೊಂಡ ಗೌರವಕ್ಕೆ ಪಾತ್ರರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ