ನ್ಯಾಯಾಲಯಕ್ಕೆ ಚಾರ್ಚ್‌ಶೀಟ್‌ ಸಲ್ಲಿಸಿದರೂ ನಟ ದರ್ಶನ್‌ ಮತ್ತು ಗ್ಯಾಂಗ್‌ಗೆ ಸದ್ಯ ಜೈಲೇ ಗತಿ

Sampriya

ಸೋಮವಾರ, 9 ಸೆಪ್ಟಂಬರ್ 2024 (14:41 IST)
ಬೆಂಗಳೂರು:  ನಟ ದರ್ಶನ್ ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ 24ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿದೆ. ಹೀಗಾಗಿ, ಕೋರ್ಟ್‌ಗೆ ಚಾರ್ಚ್‌ಶೀಟ್‌ ಸಲ್ಲಿಕೆಯಾದರೂ ಬಿಡುಗಡೆ ಭಾಗ್ಯ ಸದ್ಯಕ್ಕಿಲ್ಲ.


ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೋಮವಾರ ಎ2 ಆರೋಪಿ ದರ್ಶನ್‌ನನ್ನು ಬಳ್ಳಾರಿ ಜೈಲಿನಿಂದ, ಎ1 ಆರೋಪಿ ಪವಿತ್ರಾ ಗೌಡ ಮತ್ತಿತರನ್ನು ಪರಪ್ಪನ ಅಗ್ರಹಾರದಿಂದ ಹಾಗೂ ಮೈಸೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರುಗಿ, ವಿಜಯಪುರದ ಜೈಲಿನಿಂದ ಒಟ್ಟು 17 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಗ್ಯಾಂಗ್‌ನ ನ್ಯಾಯಾಂಗ ಬಂಧನ ಸೆ.9ರಂದು ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಎಲ್ಲ ಆರೋಪಿಗಳ ಹಾಜರಾತಿ ಪಡೆದುಕೊಂಡರು. ಈ ವೇಳೆ ಚಾರ್ಜ್ ಶೀಟ್ ನೀಡಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದರು.

ಆರೋಪಿಗಳ ಪರ ವಕೀಲರಿಗೆ ವೈಯಕ್ತಿಕವಾಗಿ ಚಾರ್ಜ್ ಶೀಟ್‌ ನೀಡಿ ಎಂದು ನ್ಯಾಯಾಧೀಶರು ಸೂಚನೆ ನೀಡಿದರು. ಆರೋಪಿಗಳು ಒಂದೊಂದು ಜೈಲಿನಲ್ಲಿದ್ದಾರೆ, ಹೀಗಾಗಿ ಆರೋಪಿಗಳ ಕೈಗೆ ಚಾರ್ಜ್ ಶೀಟ್ ಸಲ್ಲಿಸಿದರೆ ಜಾಮೀನು ಪ್ರಕ್ರಿಯೆಗೆ ತಡವಾಗುತ್ತದೆ. ಆರೋಪಿಗಳು ವಿಡಿಯೋ ಕಾನ್ಪರೆನ್ಸ್‌ನಲ್ಲಿದ್ದಾರೆ. ಅವರನ್ನು ಕೇಳಿ ಅವರ ಸೂಚನೆ ಮೇರೆಗೆ ಚಾರ್ಜ್ ಶೀಟ್ ನೀಡುವಂತೆ ವಕೀಲರು ಮನವಿ ಮಾಡಿದರು.

ಪುಟ್ಟಸ್ವಾಮಿ ,ನಂದೀಶ್, ರಾಘವೆಂದ್ರ, ಜಗದೀಶ್, ಪವನ್, ಅನುಕುಮಾರ್, ಧನರಾಜ್ , ರವಿಶಂಕರ್, ವಿನಯ್, ಪ್ರದೂಷ್, ನಾಗರಾಜು ಹಾಗೂ ಲಕ್ಷ್ಮಣ್, ದೀಪಕ್ ಕುಮಾರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಪರ ವಕೀಲರು ಯಾರೆಂದು ನ್ಯಾಯಾಧೀಶರು ಕೇಳಿದರು. ಈ ವೇಳೆ ನಟ ದರ್ಶನ್‌ ಸಿ.ವಿ. ನಾಗೇಶ್‌ ವಕೀಲರು ಎಂದು ಉತ್ತರಿಸಿದರು. ಇದಕ್ಕೂ ಮೊದಲು ರಿಮ್ಯಾಂಡ್ ಕಾಪಿಯೊಂದಿಗೆ ತನಿಖಾಧಿಕಾರಿ ಎಸಿಪಿ‌ ಚಂದನ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ನ್ಯಾಯಾಲಯಕ್ಕೆ ಹಾಜರಾದ ಎಸ್‌ಪಿಪಿ ಪ್ರಸನ್ನ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಎವಿಡೆನ್ಸ್ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್‌ ಅನ್ನು ಸಲ್ಲಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ತನಿಖಾಧಿಕಾರಿ ಎಸಿಪಿ‌ ಚಂದನ್ ಪೆನ್ ಡ್ರೈವ್, ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್ ಕಂ ಪೆನ್ ಡ್ರೈವ್ ಸೇರಿ ಒಟ್ಟು 60 ಡಿಜಿಟಲ್ ಎವಿಡೆನ್ಸ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ