ಬೆಂಗಳೂರು ಮಳೆ ಸಮಸ್ಯೆ ಪರಿಹಾರಕ್ಕೆ ಜಗ್ಗೇಶ್ ಐಡಿಯಾ

ಗುರುವಾರ, 28 ಸೆಪ್ಟಂಬರ್ 2017 (07:06 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಿಂದಾಗಿ ಜನ ಜೀವನ ಪರದಾಡುವುದನ್ನು ನೋಡಿ ಖಡಕ್ ಮಾತೊಂದನ್ನು ಹೇಳಿದ್ದಾರೆ.


ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗಿ ಹಲವಾರು ಜನ ಕಷ್ಟಪಡುವಂತಾಗಿದೆ. ಮನೆಗೆ ನೀರು ನುಗ್ಗಿ, ಗೋಡೆ ಕೌಂಪೌಂಡ್ ಕುಸಿದು ದೈನಂದಿನ ಕೆಲಸಕ್ಕೆ ತೊಂದರೆಯಾಗುತ್ತಿದೆ.

ಇದು ಪ್ರತೀ ಮಳೆಗಾಲದ ಸಮಸ್ಯೆ. ಮಳೆ ಬಂತೆಂದರೆ ಬೆಂಗಳೂರಿಗರಿಗೆ ಈ ಸಂಕಟ ತಪ್ಪಿದ್ದಲ್ಲ. ಈ ಬಗ್ಗೆ ಜಗ್ಗೇಶ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಮಳೆ ನೀರು ಹೊರ ಹೋಗಲು ಮೊದಲು ರಾಜಾ ಕಾಲುವೆ ಒತ್ತುವರಿ ತೆರವಿಗೆ ಕಠಿಣ ಕ್ರಮ ಅನಿವಾರ್ಯ. 10 ಜನರಿಗೆ ತೊಂದರೆಯಾದರೂ, ಕೋಟಿ ಜನರಿಗೆ ಉಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ