ಈ ನಟನ ಜೊತೆ ಮತ್ತೊಮ್ಮೆ ನಟಿಸಲು ಸ್ಯಾಂಡಲ್ ವುಡ್ ಗೆ ರೀ-ಎಂಟ್ರಿ ನೀಡಲಿದ್ದಾರಂತೆ ನಟಿ ರಮ್ಯಾ!

ಭಾನುವಾರ, 7 ಅಕ್ಟೋಬರ್ 2018 (08:59 IST)
ಬೆಂಗಳೂರು : ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಇದೀಗ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ನಟಿಸಲು ಮತ್ತೆ ಸ್ಯಾಂಡಲ್ ವುಡ್ ಗೆ ರೀ-ಎಂಟ್ರಿ ನೀಡಲಿದ್ದಾರಂತೆ.


ಹೌದು. ಈಗಾಗಲೇ ಸಿನಿಮಾರಂಗದಿಂದ ದೂರ ಸರಿದ ನಟಿ ರಮ್ಯಾ ಇದೀಗ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸುತ್ತಿರುವ ‘ಗಂಡುಗಲಿ ಮದಕರಿ ನಾಯಕ’ ಪೌರಾಣಿಕ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

 

ನಟಿ ರಮ್ಯಾ ಈ ಹಿಂದೆ ದರ್ಶನ್ ಅವರ ‘ದತ್ತ’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಬರೋಬ್ಬರಿ 12 ವರ್ಷದ ನಂತರ ದರ್ಶನ್ ಅವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ. ಹಾಗೇ ಇವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ‘ಕಠಾರಿ ವೀರ ಸುರಸುಂದರಾಂಗಿ’ ಪೌರಾಣಿಕ ಚಿತ್ರದಲ್ಲಿ ನಟಿಸಿದ್ದ ಕಾರಣ ಈ ಚಿತ್ರಕ್ಕೆ ಇವರೇ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಸುದ್ದಿ ರಮ್ಯಾ ಅಭಿಮಾನಿಗಳಿಗೆ ಸಂತೋಷವನ್ನುಟುಂಮಾಡುವುದಂತು ಖಂಡಿತ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ