ಶ್ರೀಗಣೇಶನ ಮೇಲೆ ಬಾಲಿವುಡ್ ನಟ ಸಂಜಯ್ ದತ್ ಭಕ್ತಿ ಎಷ್ಟಿದೆ?
ಭಾನುವಾರ, 23 ಆಗಸ್ಟ್ 2020 (14:21 IST)
ಗಣೇಶೋತ್ಸವವನ್ನು ಬಾಲಿವುಡ್ ನಟ ಸಂಜಯ್ ದತ್ ಅದ್ಧೂರಿಯಿಂದ ಆಚರಣೆ ಮಾಡುತ್ತಿದ್ದರು.
ಆದರೆ ಈ ಬಾರಿ ಅವರು ಅನಾರೋಗ್ಯ ನಿಮಿತ್ಯ ಮುಂಬೈನ ಕೊಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ಧಾರೆ.
ನಟ ಸಂಜಯ್ ದತ್, ಕಳೆದ ವರ್ಷ ತಾವು ತಮ್ಮ ಪತ್ನಿ ಮಾನ್ಯತಾ ಅವರೊಂದಿಗೆ ಮನೆಯಲ್ಲಿ ನಡೆದ ಗಣೇಶ ಹಬ್ಬದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಸಂಜಯ್ ದತ್ ಟ್ವಿಟ್ ಮಾಡಿದ್ದು, "ಆಚರಣೆಗಳು ಪ್ರತಿವರ್ಷ ಇದ್ದಷ್ಟು ದೊಡ್ಡದಲ್ಲ ಆದರೆ ಬಪ್ಪಾ ಮೇಲಿನ ನಂಬಿಕೆ ಒಂದೇ ಆಗಿರುತ್ತದೆ. ಈ ಶುಭ ಹಬ್ಬವು ನಮ್ಮ ಜೀವನದಿಂದ ಎಲ್ಲ ಅಡೆತಡೆಗಳನ್ನು ತೆಗೆದುಹಾಕುತ್ತದೆ ಮತ್ತು ನಮ್ಮೆಲ್ಲರ ಆರೋಗ್ಯ ಮತ್ತು ಸಂತೋಷದಿಂದ ಆಶೀರ್ವದಿಸಲಿ ಎಂದು ನಾನು ಬಯಸುತ್ತೇನೆ. ಗಣಪತಿ ಬಪ್ಪ ಮೊರಯಾ ಎಂದು ಬರೆದಿದ್ದಾರೆ.
The celebrations aren't as huge as they used to be every year but the faith in Bappa remains the same. I wish that this auspicious festival removes all the obstacles from our lives and bless us all with health and happiness. Ganpati Bappa Morya.