ಸಾಮಾಜಿಕ ಮಾಧ‍್ಯಮದಲ್ಲಿ ಹೊಸ ಮೈಲಿಗಲ್ಲು ತಲುಪಿದ ಅಲ್ಲು ಅರ್ಜುನ್

ಗುರುವಾರ, 27 ಮೇ 2021 (17:48 IST)
ಹೈದರಾಬಾದ್ : ಟಾಲಿವುಡ್ ನಟ ಅಲ್ಲುಅರ್ಜುನ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಇದೀಗ ಅವರು ಸಾಮಾಜಿಕ ಮಾಧ‍್ಯಮದಲ್ಲಿ ಹೊಸ ಮೈಲಿಗಲ್ಲು  ತಲುಪಿದ್ದಾರೆ.

ಅಲ್ಲು ಅರ್ಜುನ್ ಇನ್ ಸ್ಟಾಗ್ರಾಮ್ ನಲ್ಲಿ 12 ಮಿಲಿಯನ್ ಫಾಲೋವರ್ಸ್ ಅನ್ನು ಗಳಿಸಿದ್ದಾರೆ. ಅವರ ಫೇಸ್ ಬುಕ್ ಪುಟವು 2.1ಕೋಟಿ ಅನುಯಾಯಿಗಳನ್ನು ಹೊಂದಿದ್ದರೆ, ಟ್ವೀಟರ್ ನಲ್ಲಿ ಅವರಿಗೆ 5.9 ಮಿಲಿಯನ್ ಅನುಯಾಯಿಗಳಿದ್ದಾರೆ. ಅದರಂತೆ ಅವರು ಖ್ಯಾತ ನಟ ವಿಜಯ್ ದೇವರಕೊಂಡ ಅವರ ನಂತರ ಟಾಲಿವುಡ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವವರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ