ಕನ್ನಡ ಕಲಿತು ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ ತೆಲುಗು ನಟ ಸಿದ್ಧಾರ್ಥ್

ಭಾನುವಾರ, 17 ಸೆಪ್ಟಂಬರ್ 2023 (09:20 IST)
Photo Courtesy: Twitter
ಬೆಂಗಳೂರು: ತೆಲುಗು ನಟ ಸಿದ್ಧಾರ್ಥ್ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗಿ ಬರುತ್ತಿದೆ. ‘ಚಿಕ್ಕು’ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.

ಸಿದ್ಧಾರ್ಥ್ ನಾಯಕರಾಗಿರುವ ಚಿಕ್ಕು ಸಿನಿಮಾ ತೆಲುಗಿನ ಜೊತೆ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಕೆಆರ್ ಜಿ ಕನೆಕ್ಟ್ಸ್ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದೆ. ಕಿಚ್ಚ ಸುದೀಪ್ ಕನ್ನಡಕ್ಕೆ ಸಿದ್ಧಾರ್ಥ್ ಗೆ ಸ್ವಾಗತ ಕೋರಿದ್ದಾರೆ.

ಅಲ್ಲದೆ, ಈ ಸಿನಿಮಾಗಾಗಿ ಸಿದ್ಧಾರ್ಥ್ ಕನ್ನಡ ಕಲಿತು ತಾವೇ ಸ್ವತಃ ಡಬ್ ಮಾಡಿದ್ದಾರೆ ಎಂಬ ವಿಚಾರವನ್ನು ಹೊರಹಾಕಿದ್ದಾರೆ. ಸೆಪ್ಟೆಂಬರ್ 28 ರಿಂದ ಥಿಯೇಟರ್ ನಲ್ಲಿ ಚಿಕ್ಕು ಸಿನಿಮಾ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ