ನಟ ಶ್ರೀಮುರಳಿಗೆ ಬಘೀರ ಶೂಟಿಂಗ್ ವೇಳೆ ಮತ್ತೆ ಕಾಲಿಗೆ ಪೆಟ್ಟು

Krishnaveni K

ಸೋಮವಾರ, 22 ಏಪ್ರಿಲ್ 2024 (10:36 IST)
ಬೆಂಗಳೂರು: ಬಘೀರ ಶೂಟಿಂಗ್ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತೊಮ್ಮೆ ಕಾಲಿಗೆ ಏಟು ಮಾಡಿಕೊಂಡಿದ್ದಾರೆ. ಇದೀಗ ಮತ್ತೆ ಶೂಟಿಂಗ್ ಸ್ಥಗಿತಗೊಂಡಿದೆ.

ಯಾಕೋ ಬಘೀರ ಸಿನಿಮಾ ಶುರು ಮಾಡಿದ ಗಳಿಗೆಯೇ ಸರಿ ಇಲ್ಲವೇನೋ. ಶ್ರೀಮುರಳಿಗೆ ಪದೇ ಪದೇ ಅಪಘಾತವಾಗುತ್ತಲೇ ಇದೆ. ಈ ಮೊದಲು ಬಘೀರ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾಲಿಗೆ ಪೆಟ್ಟಿ ಮಾಡಿಕೊಂಡಿದ್ದ ಶ್ರೀಮುರಳಿ ಸುಧಾರಿಸಿಕೊಳ್ಳಲು ತುಂಬಾ ಸಮಯವೇ ಹಿಡಿದಿತ್ತು.

ಶಸ್ತ್ರಚಿಕಿತ್ಸೆಗೊಳಗಾಗಿದ್ದ ಶ್ರೀಮುರಳಿ ಎರಡು ತಿಂಗಳ ಹಿಂದಷ್ಟೇ ಸುಧಾರಿಸಿಕೊಂಡು ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇದೀಗ ಮತ್ತೊಮ್ಮೆ ಬಘೀರ ಶೂಟಿಂಗ್ ವೇಳೆ ಅಪಘಾತ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಕಾಲಿಗೆ ಏಟು ಮಾಡಿಕೊಂಡಿದ್ದಾರೆ.

ಬಳಿಕ ಅವರನ್ನು ವೀಲ್ ಚೇರ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತೀವ್ರ ನೋವಿನಿಂದ ಒದ್ದಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೊಮ್ಮೆ ಕಾಲಿಗೆ ಏಟು ಮಾಡಿಕೊಂಡಿರುವುದು ಶ್ರೀಮುರಳಿ ಮತ್ತು ಬಘೀರ ಶೂಟಿಂಗ್ ಗೆ ಅಡಚಣೆಯಾಗಿದೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ