ನಟ ಸುಶಾಂತ್ ಸಿಂಗ್ ಕೇಸ್ : ಮತ್ತೆ 6 ಜನ ಅರೆಸ್ಟ್

ಸೋಮವಾರ, 14 ಸೆಪ್ಟಂಬರ್ 2020 (20:10 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ಮತ್ತೆ ಆರು ಜನರನ್ನು ಬಂಧನ ಮಾಡಿದೆ.

ಕರಮ್‌ಜೀತ್ ಸಿಂಗ್ ಆನಂದ್, ಡ್ವೇನ್ ಫರ್ನಾಂಡಿಸ್, ಸಂಕೇತ್ ಪಟೇಲ್, ಅಂಕುಶ್ ಅನ್ರೆಜಾ, ಸಂದೀಪ್ ಗುಪ್ತಾ ಮತ್ತು ಅಫ್ತಾಬ್ ಫತೇಹ್ ಅನ್ಸಾರಿ ಬಂಧಿತರಾಗಿದ್ದಾರೆ.

ಈ ಮೂಲಕ ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 16 ಕ್ಕೆ ಏರಿಕೆಯಾದಂತಾಗಿದೆ.  

ನಟನ ಸಾವಿನ ಬಗ್ಗೆ ಮಾದಕವಸ್ತು ತನಿಖೆಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಡೆಸುತ್ತಿರುವ ತನಿಖೆ ಪ್ರಗತಿಯಲ್ಲಿದೆ.

ಬಂಧಿತ ಎಲ್ಲಾ ಆರು ಆರೋಪಿಗಳು ಮುಂಬೈಯವರಾಗಿದ್ದು, ಡ್ರಗ್ಸ್, ಕ್ಯುರೇಟೆಡ್ ಗಾಂಜಾ ಮತ್ತು ಹಶಿಶ್‌ ವ್ಯವಹಾರ ನಡೆಸುತ್ತಿದ್ದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ