ತಾತನಾದ ಸಂಭ್ರಮದಲ್ಲಿ ನಟ ಸಿಯಾನ್ ವಿಕ್ರಮ

ಗುರುವಾರ, 12 ನವೆಂಬರ್ 2020 (15:41 IST)
ಚೆನ್ನೈ : ತಮಿಳಿನ ಖ್ಯಾತ ನಟ ಸಿಯಾನ್ ವಿಕ್ರಮ ಅವರು ತಾತನಾದ ಸಂಭ್ರಮದಲ್ಲಿದ್ದಾರೆ.

ವಿಕ್ರಮ್ ಅವರ ಪುತ್ರಿ ಅಕ್ಷಿತಾ ಅವರಿಗೆ 2017ರಲ್ಲಿ ಬಹಳ ಅದ್ಧೂರಿಯಾಗಿ ವಿವಾಹವಾಗಿತ್ತು. ವಿಕ್ರಮ್ ಮಗಳು ಅಕ್ಷಿತಾ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಹೆಣ‍್ಣುಮಗುವಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ನಟ ವಿಕ್ರಮ್ ಅಜ್ಜನಾಗಿದ್ದು, ಈ ಸಂಭ್ರಮವನ್ನು ತಮ್ಮ ಕುಟುಂಬದವರ ಜೊತೆ ಆಚರಿಸುತ್ತಿದ್ದಾರೆ.

ಪ್ರಸ್ತುತ ವಿಕ್ರಮ್ ಅವರು ಅಜಯ್ ಜ್ಞಾನಮುತ್ತು ನಿರ್ದೇಶನದ ಕೋಬ್ರಾಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ