ಮುನಿಸು ಮರೆತು ಅಲ್ಲು ಕುಟುಂಬಕ್ಕೆ ಧೈರ್ಯ ತುಂಬಲು ಬಂದ ನಟ ಚಿರಂಜೀವಿ, ಸುರೇಖಾ

Sampriya

ಶುಕ್ರವಾರ, 13 ಡಿಸೆಂಬರ್ 2024 (15:50 IST)
Photo Courtesy X
ತೆಲಂಗಾಣ: ಅಲ್ಲು ಅರ್ಜುನ್ ಈಗ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್‌ನಿಂದ ದೂರವಾಗಿದ್ದಾರೆ ಎಂಬ ಮಾತು ಈ ಹಿಂದೆ ಹರಿದಾಡಿತ್ತು. ಆದರೆ ಅವೆಲ್ಲವನ್ನೂ ಮರೆತು ಮಾವ ಚಿರಂಜೀವಿ ಅವರು ಇದೀಗ ಅರೆಸ್ಟ್ ಆಗಿರುವ ನಟ ಅಲ್ಲು ಅರ್ಜುನ್ ಅವರ ಕುಟುಂಬವನ್ನು ಭೇಟಿಯಾಗಲು ಚಿರಂಜೀವಿ ಹಾಗೂ ಪತ್ನಿ ರೇವತಿ ಹೋಗಿದ್ದಾರೆ.

ನಟ ಚಿರಂಜೀವಿ ತಮ್ಮ ಸೋದರಳಿಯ, ನಟ ಅಲ್ಲು ಅರ್ಜುನ್ ಅವರ ಮನೆಗೆ ಭೇಟಿ ನೀಡಿದ್ದರು. ಜುಬಿಲಿ ಹಿಲ್ಸ್‌ನಲ್ಲಿರುವ ಅರ್ಜುನ್ ಅವರ ಮನೆಗೆ ಚಿರಂಜೀವಿ ಹಾಗೂ ಪತ್ನಿ ಸುರೇಖಾ ಭೇಟಿ ನೀಡಿದರು. ಅರ್ಜುನ್ ಬಂಧನದ ಸುದ್ದಿ ಹೊರಬಿದ್ದ ನಂತರ ಮತ್ತು ಚಿಕ್ಕದಪಲ್ಲಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡ ನಂತರ ಕೂಡಲೇ ಚಿರಂಜೀವಿ ಭೇಟಿ ನೀಡಿದರು.

ಶುಕ್ರವಾರ ಪುಷ್ಪ 2: ದಿ ರೂಲ್‌ನ ಮೊದಲ ಪ್ರದರ್ಶನದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿ, ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಅಲ್ಲು ಅರ್ಜುನ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.  ಇದೀಗ  ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಟ ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಎರಡು ದಿನಗಳ ನಂತರ ಈ ಬಂಧನ ಸಂಭವಿಸಿದೆ.

ಇನ್ನೂ ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ನಡುವೆ ಈ ಹಿಂದೆ ಮನಃಸ್ತಾಪ ಇತ್ತು. ಮೂಲಗಳ ಪ್ರಕಾರ ದೋಸ್ತಿ ನೆಪದಲ್ಲಿ ವೈಸಿಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಕೊನೆಯ ಕ್ಷಣದಲ್ಲಿ ಅಲ್ಲು ಅರ್ಜುನ್ ಪಾಲ್ಗೊಂಡಿರುವುದು ಅವರ ಕೋಪಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ