#MeToo ಬಾಲಿವುಡ್ ನಲ್ಲಿ ಫೇಲ್ ಆಗಿದೆ ಎಂದ ನಟಿ ಕಂಗನಾ ರಣಾವತ್

ಭಾನುವಾರ, 20 ಸೆಪ್ಟಂಬರ್ 2020 (19:27 IST)
ಬಾಲಿವುಡ್ ನಟಿ ಕಂಗನಾ ರಣಾವತ್ #MeToo ಬಗ್ಗೆ ಹೊಸ ಬಾಂಬ್ ಸಿಡಿಸಿದ್ದು, ಇದರಿಂದ ಬಾಲಿವುಡ್ ಅಂಗಳ ಶೇಕ್ ಆದಂತಿದೆ.


ಬಾಲಿವುಡ್‌ನಲ್ಲಿ #MeToo ಅಭಿಯಾನ ದೊಡ್ಡ ವೈಫಲ್ಯವಾಗಿದೆ. ಇದೀಗ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಆರೋಪ ಮಾಡಿರುವ ನಟಿ ಪಾಯಲ್ ಘೋಷ್ ಅವಮಾನಕ್ಕೆ ಒಳಗಾಗುತ್ತಾರೆ ಎಂದು ನಟಿ ಕಂಗನಾ ರಣಾವತ್ ಭವಿಷ್ಯ ನುಡಿದಿದ್ದಾರೆ.

ನಟಿ ಪಾಯಲ್ ಘೋಷ್ ಅವರು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

ಇದೀಗ ಕಂಗನಾ ರಣಾವತ್ ಅವರು ಬಾಲಿವುಡ್‌ನಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ್ಧಾರೆ. ಬಾಲಿವುಡ್‌ನಲ್ಲಿ #MeToo ದೊಡ್ಡ ವೈಫಲ್ಯವಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳ ಬೂಟಾಟಿಕೆ ಮತ್ತು ಹೆಚ್ಚಿನ ಒಳ್ಳೆಯದಕ್ಕಾಗಿ ನಿಲ್ಲಲು ಮತ್ತು ಮಾತನಾಡಲು ಇಚ್ಛಿಸುವುದಿಲ್ಲ. ಉದಾರವಾದಿಗಳೇ ಹೆಚ್ಚಿನ ಪ್ರಮಾಣದಲ್ಲಿ ಆ ಕೆಲಸ ಮಾಡುತ್ತಿದ್ದು, ಅವರೇ ಮೀಟೂ ಚಳುವಳಿಯನ್ನು ಕೊಂದರು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ