ಮನಿ ಲಾಂಡ್ರಿಂಗ್ ಕೇಸ್ ನಲ್ಲಿ ಬಂಧಿತರಾದ ಅಧಿಕಾರಿಯೊಂದಿಗೆ ನಟಿ ನವ್ಯಾ ನಾಯರ್ ಸ್ನೇಹ!

ಗುರುವಾರ, 31 ಆಗಸ್ಟ್ 2023 (16:47 IST)
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ  ಐ.ಆರ್.ಎಸ್. ಅಧಿಕಾರಿ ಸಚಿನ್ ಸಾವಂತ್ ಜೊತೆ ನಟಿ ನವ್ಯಾ ನಾಯರ್ ಸ್ನೇಹ ಸಂಬಂಧ ಹೊಂದಿದ್ದರು ಎಂಬ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕನ್ನಡದಲ್ಲೂ ನಟಿಸಿರುವ ಮಲಯಾಳಂ ನಟಿ ನವ್ಯಾ ಜೊತೆ ಸಚಿನ್ ಗೆ ಸ್ನೇಹ ಸಂಬಂಧವಿತ್ತು. ಇದೇ ಕಾರಣಕ್ಕೆ ಅವರಿಗೆ ಬೆಲೆಬಾಳುವ ಉಡುಗೊರೆಗಳನ್ನೂ ನೀಡಿದ್ದರು. ಅಲ್ಲದೆ, ಹಿಂದೊಮ್ಮೆ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಲು ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದರು ಎಂದು ವಿಚಾರಣೆ ವೇಳೆ ಬಯಲಾಗಿದೆ.

ಇ.ಡಿ. ಅಧಿಕಾರಿಗಳು ಸಚಿನ್ ಸಾವಂತ್ ಅವರ ಮೊಬೈಲ್ ಡೇಟಾ, ಸಂದೇಶಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಈ ಬಗ್ಗೆ ನವ್ಯಾ ನಾಯರ್ ಅವರನ್ನು ಕರೆಸಿ ವಿಚಾರಣೆಯನ್ನೂ ಮಾಡಲಾಗಿದೆ. ಈ ವೇಳೆ ನಟಿ ತಮ್ಮ ನಡುವೆ ಸ್ನೇಹ ಸಂಬಂಧವಿತ್ತು, ಆದರೆ ಅದಕ್ಕಿಂತ ಮಿಗಿಲಾಗಿ ಯಾವುದೇ ಸಂಬಂಧವಿರಲಿಲ್ಲ. ಸ್ನೇಹಿತನಾಗಿ ಉಡುಗೊರೆ ನೀಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ